Kannada NewsKarnataka NewsLatest

​*ಶ್ರೀಮತಿ ಗಂಗಮ್ಮಾ ಸೋಮಪ್ಪಾ ಬೊಮ್ಮಾಯಿ ಫೌಂಡೇಶನ್‌ನಿಂದ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ*

ಪ್ರಗತಿವಾಹಿನಿ ಸುದ್ದಿ: ​ಹುಬ್ಬಳ್ಳಿ: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಎಜುಕೇಶಮ್ ಆಂಡ್ ವೆಲ್ ಫೇರ್ ಫೌಂಡೇಶನ್ ಕಳೆದ ಕೆಲವು ವರ್ಷಗಳಿಂದ ಕನ್ನಡದ ಶ್ರೇಷ್ಠ ಕೃತಿಗಳಿಗೆ ನೀಡುತ್ತಾ ಬಂದಿರುವ ಪ್ರತಿಷ್ಠಿತ ಪುಸ್ತಕ ಪ್ರಶಸ್ತಿಗಳಿಗಾಗಿ ಲೇಖಕರಿಂದ ಕೃತಿಗಳನ್ನು ಆಹ್ವಾನಿಸಿದೆ.

ಈ ಕುರಿತು ಸಂಸ್ಥೆಯ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ​ಸಾಹಿತ್ಯ ಕ್ಷೇತ್ರದ ಮೂರು ವಿಭಿನ್ನ ಪ್ರಕಾರಗಳ ಕೃತಿಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ​ಜಾನಪದ ಸಿರಿ ಪ್ರಶಸ್ತಿ: ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ಕೃತಿಗೆ.
​ಅಕ್ಕ ಪ್ರಶಸ್ತಿ: ಮಹಿಳಾ ಲೇಖಕಿಯರು ರಚಿಸಿದ ಯಾವುದೇ ಸಾಹಿತ್ಯ ಪ್ರಕಾರದ ಕೃತಿಗೆ. ​ಅರಳು ಮೊಗ್ಗು ಪ್ರಶಸ್ತಿ: 18 ವರ್ಷದೊಳಗಿನ ಮಕ್ಕಳು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ಪ್ರಶಸ್ತಿ ನೀಡಲಾಗುತ್ತದೆ. ​ಪ್ರತಿಯೊಂದು ಪ್ರಶಸ್ತಿಯು ₹25,000/- ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
​ಈ ಪ್ರಶಸ್ತಿಗೆ ಜನವರಿ 2025 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ ಪ್ರಥಮ ಬಾರಿಗೆ ಮುದ್ರಣಗೊಂಡ (ಪ್ರಥಮ ಆವೃತ್ತಿ) ಮೇಲ್ಕಂಡ ಪ್ರಕಾರದ ಕೃತಿಗಳು ಮಾತ್ರ ಅರ್ಹವಾಗಿರುತ್ತವೆ. ನವೆಂಬರ್ 5, 2026 ರೊಳಗೆ ಆಸಕ್ತ ಲೇಖಕರು ತಮ್ಮ ಕೃತಿಯ 3 ಪ್ರತಿಗಳನ್ನು ​ಶ್ರೀ ಚಂದ್ರಶೇಖರ ವಸ್ತ್ರದ, ‘ಬೆಳಗು’, ಆನಂದ ಆಶ್ರಮ ರಸ್ತೆ, ಪಂಚಾಕ್ಷರಿ ನಗರ, 5ಎ ಕ್ರಾಸ್, ಗದಗ – 582101. ದೂರವಾಣಿ ಸಂಖ್ಯೆ: 94486-77434 ಈ ವಿಳಾಸಕ್ಕೆ ಕಳುಹಿಸಲು ಕೋರಿದ್ದಾರೆ.

Home add -Advt

Related Articles

Back to top button