
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸದಲಗಾ ಪೊಲೀಸರಿಂದ ಇಬ್ಬರು ಅಂತರ ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ ಒಟ್ಟು 5 ಬೈಕ್ ವಶಕ್ಕೆ ಪಡೆಯಲಾಗಿದೆ.
ಶುಭಂ ರಾಜು ಮನ್ನೋಳೆ, ಆಕಾಶ ಪ್ರಕಾಶ ವಡರ ಬಂಧಿತ ಬೈಕ್ ಕಳ್ಳರು. ಇವರಿಂದ 2ಲಕ್ಷ ಮೌಲ್ಯದ 5 ಬೈಕ್ ವಶಕ್ಕೆ ಪಡೆಯಲಾಗಿದೆ.
ಈ ಪತ್ತೆ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಕೆ. ರಾಮರಾಜನ್ ರವರು ಪ್ರಶಂಶಿಸಿರುತ್ತಾರೆ.



