Belagavi NewsBelgaum NewsKannada NewsKarnataka NewsNationalPolitics

*ಮತ್ತೆ 10 ದಿನಗಳ ಕಾಲ ಕಾಲುವೆಗಳಿಗೆ ನೀರು ಬಿಡುಗಡೆ: ಸಚಿವ ಸತೀಶ್ ಜಾರಕಿಹೊಳಿ ಆದೇಶ*

ಪ್ರಗತಿವಾಹಿನಿ ಸುದ್ದಿ: ರೈತರ ಹಿತದೃಷ್ಟಿಯಿಂದ ಜಿಎಲ್‌ಬಿಸಿ ಮತ್ತು ಜಿಆರ್‌ಬಿಸಿ ಕಾಲುವೆಗಳ ಮೂಲಕ ಇನ್ನೂ 10 ದಿನಗಳ ಕಾಲ ನೀರು ಬಿಡುಗಡೆ ಮಾಡಲು ಸಚಿವ ಸತೀಶ್ ಜಾರಕಿಹೊಳಿ ಆದೇಶಿಸಿದ್ದಾರೆ ಎಂದು ಅವರ ಆಪ್ತ ಸಹಾಯಕ ಶಿವು ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕರಣೆಯಲ್ಲಿ ವಿಷಯ ತಿಳಿಸಿದ ಅವರು, ಮಳೆ ಅಭಾವ ಇರುವದರಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ಜು. 24ರಿಂದ ಆಗಸ್ಟ್‌ 3ರವರೆಗೆ 10 ದಿನಗಳ ಕಾಲ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿತ್ತು. ಅದರಂತೆ ಮತ್ತೆ 10 ದಿನಗಳ ಕಾಲ ಕಾಲುವೆಗಳಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಆದೇಶ ನೀಡಿದ್ದಾರೆ. 

1 ಟಿಎಂಸಿ ನೀರು ಬಿಡುಗಡೆಗೆ ಸೂಚನೆ

ನಿನ್ನೆಯ ದಿನ ಸಚಿವ ಸತೀಶ್‌ ಜಾರಕಿಹೊಳಿ ಅವರು ಖುದ್ದಾಗಿ  ಜಿಎಲ್‌ಬಿಸಿ ಹಾಗೂ ಜಿಆರ್‌ ಬಿಸಿ ಕೆನೆಲ್‌ ಗಳಿಗೆ ಭೇಟಿ ನೀಡಿದಾಗ ಬಹಳಷ್ಟು ನೀರು ಕೊಳವಿಯಿಂದ 32 ಕಿಮಿ ಹಿಂದೆ  ನೀರು ಸೋರಿಕೆಯಾಗಿರುವುದು ಕಂಡು ಬಂದಿತ್ತು. ಈ ವಿಷಯ ಮನವರಿಕೆ ಮಾಡಿಕೊಂಡ ಸಚಿವರು,  1 ಟಿಎಂಸಿ ನೀರಿನಲ್ಲಿ ಅರ್ಧ ಟಿಎಂಸಿ ನೀರನ್ನು ಜಿಆರ್‌ಬಿಸಿಗೆ, ಇನ್ನು ಅರ್ಧ ಟಿಎಂಸಿ ನೀರನ್ನು ಸಿಬಿಸಿ ಚಿಕ್ಕೋಡಿ  ಉಪ ಕಾಲುವೆಗೆ ಬಿಡಲು ತಿಳಿಸಿದ್ದಾರೆ.

Home add -Advt

ಸಹಕಾರ ನೀಡಿ

ಮೇಲಭಾಗ  ಬೇಟಗೇರಿ, ಮಮದಾಪೂರ ಹಾಗೂ ಗೋಕಾಕ ರೈತರು ಕೆಳಭಾಗದ ರೈತರಾದ ಕೌಜಲಗಿ, ಯಾದವಾಡ ಹಾಗೂ ಗದ್ದನಕೇರಿ ರೈತರಿಗೆ ನೀರು ಸದ್ಬಳಿಕೆಗೆ ಸಹಕಾರ ನೀಡಬೇಕಿದೆ. ʻ10ʼ ದಿನಗಳಲ್ಲಿ ಮೇಲ್ಬಾಗದ  ರೈತರಿಗೆ 6 ದಿನ, ಕೆಳಭಾಗದ ರೈತರಿಗೆ 4 ದಿನ ನೀರು ಹರಿಸುವಂತೆ  ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡದ್ದಾರೆ. ಆದರಿಂದ ಎಲ್ಲಾ ರೈತರು ಹರಿಸುವ ನೀರನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ರೈತರಲ್ಲಿ ಸಚಿವರು ಮನವಿ ಎಂದು ಮಾಡಿಕೊಂಡಿದ್ದಾರೆ  ಶಿವು ಪಾಟೀಲ್ ಅವರು ತಿಳಿಸಿದ್ದಾರೆ.

Related Articles

Back to top button