Karnataka NewsLatestPolitics

*ಮೂರು ವರ್ಷಗಳಾದರೂ ಟೆಕ್ ಆಫ್ ಆಗದ ಸರ್ಕಾರ: ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕಕ್ಕೆ, ಕನ್ನಡಿಗರಿಗೆ ನೆಮ್ಮದಿ ಇಲ್ಲ: ಆರ್.ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸಚಿವ ಸ್ಥಾನ ಕೈತಪ್ಪಿದ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಈ ಬೆಳವಣಿಗೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

*ಇಂಡಿ ಶಾಸಕ ಯಶವಂತರಾಯ ಗೌಡ ಅವರಿಂದ ರಾಜೀನಾಮೆ

*ನಾಳೆ ರಾಜಿನಾಮೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ

Home add -Advt

*ಪಕ್ಷ ವಿರೋಧಿಗಳಿಗೆ ಸಚಿವ ಸ್ಥಾನ, ನಿಷ್ಠಾವಂತರಿಗೆ ನಿರಾಸೆ ಎಂದು ಕಾಂಗ್ರೆಸ್ ಹೈಮಾಂಡ್ ವಿರುದ್ಧ ಹಿರಿಯ ಶಾಸಕ ತನ್ವೀರ್ ಸೇಠ್ ಅಸಮಾಧಾನ

*ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆ

*ಪ್ರಾತಿನಿಧ್ಯ ಸಿಗದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಶಾಸಕರಿಂದ ನಾಳೆ ಮಹತ್ವದ ಸಭೆ, ಸಾಮೂಹಿಕ ರಾಜೀನಾಮೆಯ ಕೂಗು.

*ರಾಯಚೂರು, ಯಾದಗಿರಿ, ಉತ್ತರ ಕನ್ನಡ ಜಿಲ್ಲೆಗಳಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ.

*ಗೃಹಲಕ್ಷ್ಮಿ, ಶಕ್ತಿ ಎಂದು ಹೆಣ್ಣುಮಕ್ಕಳ ಮೂಗಿಗೆ ತುಪ್ಪ ಸವರಿ, ಒಬ್ಬ ಮಹಿಳೆಗೂ ಸಚಿವ ಸಂಪುಟದಲ್ಲಿ ಸ್ಥಾನವೇ ಕೊಡಲಿಲ್ಲ.

ಮೂರು ವರ್ಷ ಪವರ್ ಶೇರಿಂಗ್ ಫಾರ್ಮುಲಾ, ಅಧಿಕಾರ ಹಸ್ತಾಂತರದ ಕಚ್ಚಾಟ. ಈಗ ಸಚಿವ ಸಂಪುಟ ವಿಸ್ತರಣೆಯ ಗೊಂದಲ. ಒಟ್ಟಿನಲ್ಲಿ ಈ ದರಿದ್ರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಟೆಕ್ ಆಫ್ ಆಗಲೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕಕ್ಕೆ ಉಳಿಗಾಲವಿಲ್ಲ, ಕನ್ನಡಿಗರಿಗೆ ನೆಮ್ಮದಿ ಇಲ್ಲ ಎಂದಿದ್ದಾರೆ.

Related Articles

Back to top button