Belagavi NewsBelgaum NewsKannada NewsKarnataka News

*15 ಜನ‌ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆ ಶಿವಕುಮಾರ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ ಆಗಸ್ಟ್​​ 3ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದೆ. 

ನಾಳೆಯಿಂದ ಆಗಸ್ಟ್ 27ರವರೆಗೆ ವಿಧಾನಮಂಡಲ ಮುಂಗಾರು ಅಧಿವೇಶನ ನಿಗದಿಯಾಗಿದ್ದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯದಿರುವುದು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ನಡುವೆ ಅಧಿವೇಶನ ಆರಂಭದ ಮುನ್ನಾ ದಿನವೇ ನೂತನ ಸಚಿವರಿಗೆ ಇಲಾಖಾವಾರು ಜವಾಬ್ದಾರಿ ಹಂಚಿಕೆ ನಡೆದಿದೆ.

Home add -Advt

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಭಾರಿ ಅಸಮಾಧಾನ ಭುಗಿಲೆದ್ದಿದ್ದ ಹಿನ್ನೆಲೆ ಕಾಂಗ್ರೆಸ್​​ ಹೈಕಮಾಂಡ್​​, ಅಳೆದು ತೂಗಿ ನೂತನ ಸಚಿವರಿಗೆ ಜವಾಬ್ದಾರಿ ನೀಡಿದೆ. 

ಯಾರಿಗೆ ಯಾವ್ ಖಾತೆ

ಎನ್​.ಚಲುವರಾಯಸ್ವಾಮಿ-ಕೃಷಿ ಇಲಾಖೆ

ರಿಜ್ವಾನ್ ಅರ್ಷದ್-ಆಹಾರ & ನಾಗರಿಕ ಸರಬರಾಜು ವ್ಯವಹಾರ

ಕೆ.ಹೆಚ್​.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ

ಸಂತೋಷ್ ಲಾಡ್-ಕಾರ್ಮಿಕ ಇಲಾಖೆ

ಕೆ.ಎಸ್.ಬಸವಂತಪ್ಪ- ಮೀನುಗಾರಿಕೆ, ಬಂದರು ಮತ್ತು ಒಳನಾಡು

ಮಧು ಬಂಗಾರಪ್ಪ – ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ ಇಲಾಖೆ

ಜಮೀರ್ ಅಹ್ಮದ್ ಖಾನ್​-ವಸತಿ ಇಲಾಖೆ

ಲಕ್ಷ್ಮಣ ಸವದಿ-ಸಹಕಾರ ಇಲಾಖೆ

ಡಾ.ಅಜಯ್​ ಸಿಂಗ್​-ಅರಣ್ಯ ಇಲಾಖೆ

ಎಸ್​.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂವಿಜ್ಞಾನ ಇಲಾಖೆ

ಹೆಚ್​.ಸಿ.ಬಾಲಕೃಷ್ಣ-ಸಣ್ಣ ನೀರಾವರಿ ಇಲಾಖೆ

ಪುಟ್ಟರಂಗ ಶೆಟ್ಟಿ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಶಿವಲಿಂಗೇಗೌಡ – ಅಬಕಾರಿ

ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 15 ಮಂದಿಗೆ ಮಾತ್ರ ಈ ಗ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವರಾದ ನಾಗೇಂದ್ರ , ವಿಜಯಾನಂದ ಕಾಶಪ್ಪನವರ್, ನರೇಂದ್ರ ಸ್ವಾಮಿ, ಟಿ ರಘುಮೂರ್ತಿ ಇಲ್ಲಿಯವರೆಗೆ ಖಾತೆ ಫೈನಲ್‌ ಆಗಿಲ್ಲ. ಈ ಸಚಿವರಿಗೆ ಯಾವ ಖಾತೆ ನೀಡಬೇಕು ಎನ್ನುವುದರ ಬಗ್ಗೆ ಹೈಕಮಾಂಡ್ ಜೊತೆ ಡಿಕೆಶಿ ಚರ್ಚೆ ಮಾಡುತ್ತಿದ್ದಾರೆ. ಎಲ್ಲವೂ ಅಂತಿಮವಾದ ಬಳಿಕ ಸಿಎಂ ಸಚಿವರ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಿದ್ದಾರೆ.

Related Articles

Back to top button