Belagavi NewsBelgaum NewsKannada NewsKarnataka News

*ಸಿಪಿಐ ಗಡ್ಡೆಕರ್‌ಗೆ ರಾಷ್ಟ್ರಪತಿ ಹಾಗೂ ಮೂವರು ಪೊಲೀಸ್ ಅಧಿಕಾರಿಗಳಿಗೆ ಡಿಜಿ, ಐಜಿಪಿ ಪದಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ. ಆರ್. ಗಡ್ಡೆಕರ್ ರವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ತಡೆಗಟ್ಟುವಿಕೆ ಹಾಗೂ ಪತ್ತೆ ಕಾರ್ಯದಲ್ಲಿ ಮತ್ತು ಸೈಬ‌ರ್ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ, 2026ನೇ ಸಾಲಿನ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನೀಡಲಾಗುವ  ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ” ವನ್ನು ನೀಡಿ ಪುರಸ್ಕರಿಸಲಾಗಿದೆ.

ಜೊತೆಗೆ ಬೆಳಗಾವಿ ನಗರದ ಸಿಎಆರ್‌ ಘಟಕದ ಆರ್ ಪಿಐ ಜಾಫರ್‌ಸಾಬ್ ಹೆಚ್ ಶೇಖ್, ಬೆಳಗಾವಿ ನಗರ ವಿಶೇಷ ವಿಭಾಗದ ಎಎಸ್ ಐ ಸಂಜೀವಕುಮಾರ ಕುರಾಡೆ ಹಾಗೂ ಬೆಳಗಾವಿ ನಗರದ ಸಿಸಿಆರ್‌ಬಿ ಘಟಕದ ಮಹಾದೇವ ಕಾಶಿದ ರವರು ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ, 2025-26ನೇ ಸಾಲಿನ “DG & IGP Commendation Disc” ಪದಕವನ್ನು ನೀಡಿ ಗೌರವಿಸಲಾಗಿದೆ.

Home add -Advt

Related Articles

Back to top button