CrimeKannada NewsKarnataka News

*ತಂದೆ ಮಗನ ಸಾವಿಗೆ ಟ್ವಿಸ್ಟ್: ಪ್ರಿಯಕರನ ಜೊತೆ ಸೇರಿ ಗಂಡ ಹಾಗೂ ಮಗನನ್ನು ಕೊಂದ ಕ್ರೂರಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ನಡೆದ ಜೋಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಮೃತ ಅಭಿನಂದನ್ ಅವರ ಪತ್ನಿ ಹರಿಣಿ, ಪ್ರಿಯಕರ ವಿನಯ್ ಜೊತೆ ಸೇರಿ ಗಂಡ ಹಾಗೂ ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ.

ಘಟನೆ ನಡೆದ ರಾತ್ರಿ ಸುಮಾರು 11 ಗಂಟೆ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಇದೇ ವೇಳೆ ಹರಿಣಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಾಳೆ. ಬಳಿಕ ಇಬ್ಬರೂ ಸೇರಿ ಅಭಿನಂದನ್‌ನನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಮನೆಯಲ್ಲಿದ್ದ ಸೌಟ್‌ನಿಂದ ಅಭಿನಂದನ್ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಈ ವೇಳೆ ಪುತ್ರ ಯದುವೀರ್ ಘಟನೆಯನ್ನು ನೋಡಿದ್ದು, ಮುಂದೆ ತಮಗೆ ತೊಂದರೆಯಾಗಬಹುದು ಎಂದು ಭಾವಿಸಿದ ಹರಿಣಿ ಹಾಗೂ ವಿನಯ್, ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. 

Home add -Advt

ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಹರಿಣಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದಿದ್ದಾಳೆ. ಅಭಿನಂದನ್ ಅವರ ರಕ್ತದ ಕಲೆಗಳು ಬಿದ್ದಿದ್ದ ಬಟ್ಟೆಗಳನ್ನು ಬದಲಾಯಿಸಿ, ಅವುಗಳನ್ನು ರಾತ್ರೋರಾತ್ರಿ ತೊಳೆದು ಹಾಕಿದ್ದಳು. ನಂತರ ಮಗುವನ್ನು ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿರುವುದಾಗಿ ಹರಿಣಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.

ತಮ್ಮ ಪ್ಲಾನ್‌ನಂತೆ ಕೊಲೆ ನಡೆಸಿದ ಬಳಿಕ ವಿನಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಚಿಕ್ಕಬಾಣಾವರ ಪೊಲೀಸರು ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಪೊಲೀಸರು ತನಿಖೆ ತೀವ್ರಗೋಳಿಸಿದ್ದಾರೆ. 

Related Articles

Back to top button