*ಭುವನೇಶ್ವರಿ ಉತ್ಸವ ಸಂಘಕ್ಕೆ 45ರ ಸಂಭ್ರಮ: ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳ ಆಯೋಜನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಭುವನೇಶ್ವರಿ ಉತ್ಸವ ಸಂಘವು ಈ ವರ್ಷ 45ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಸಂಘದ ಅಧ್ಯಕ್ಷೆ ರಂಜನಾ ನಾಯಕ್ ಅವರ ನೇತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ 6ರಂದು ಬಿ.ಕೆ. ಮಾಡೆಲ್ ಶಾಲೆಯ ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಅಡುಗೆ ಸ್ಪರ್ಧೆ (ಸ್ವೀಟ್ ಕಾರ್ನ್), ರಂಗೋಲಿ ಸ್ಪರ್ಧೆ, ಡಿ.ಆರ್. ಬೇಂದ್ರೆ ಅವರ ಗೀತೆಗಳ ಸಾಮೂಹಿಕ ಗಾಯನ ಹಾಗೂ ಕರ್ನಾಟಕ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.
ಅದೇ ರೀತಿ, ಅಕ್ಟೋಬರ್ 13, 14 ಮತ್ತು 15ರಂದು ಕುಮಾರ ಗಂಧರ್ವ ಸಭಾಂಗಣದಲ್ಲಿ ನವರಸಗಳನ್ನು ಆಧರಿಸಿದ ನಾಟಕ ಸ್ಪರ್ಧೆ ಹಾಗೂ ಭಕ್ತಿಗೀತೆ ಆಧಾರಿತ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ಭಾರತಿ ವಡವಿ – 9845538279 ಅಥವಾ ಶುಭದಾ ಕೊತುಳಕರ – 9902852367 ಅವರನ್ನು ಸಂಪರ್ಕಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಭುವನೇಶ್ವರಿ ಉತ್ಸವ ಸಂಘದ 45ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.




