*ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಸೇರಿದಂತೆ 15 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಭೂಷಣ್ ಬೋರಸೆ, ಎನ್.ಶಶಿಕುಮಾರ್ ಸೇರಿದಂತೆ 15 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿಗಳ ಪಟ್ಟಿ:
ನಂಜುಂಡಸ್ವಾಮಿ- ಎಡಿಜಿಪಿ, ಮಾನವ ಹಕ್ಕುಗಳ ಆಯೋಗ
ದಿವ್ಯಜ್ಯೋತಿ ರೇ – ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ವಿಭಾಗ
ಅಮಿತ್ ಸಿಂಗ್ -ಐಜಿಪಿ, ಕೆ ಎಸ್ ಆರ್ ಪಿ
ಆರ್.ಚೇತನ್ – ಐಜಿಪಿ, ಪಶ್ಚಿಮ ವಲಯ, ಮಂಗಳೂರು
ನಿಕ್ಕಿಮ್ ಪ್ರಕಾಶ್ – ಐಜಿಪಿ, ಪೊಲೀಸ್ ಆಯುಕ್ತ ಬೆಳಗಾವಿ
ಭೂಷಣ್ ಬೋರಸೆ – ಡಿಐಜಿಪಿ, ಆಯುಕ್ತ ಹುಬ್ಬಳ್ಳಿ-ಧಾರವಾಡ
ಡಿಐಜಿಪಿ ಎನ್.ಶಶಿಕುಮಾರ್ ಗೆ ಸ್ಥಳ ತೋರಿಸದೇ ವರ್ಗಾವಣೆ
ಶಿವಪ್ರಕಾಶ್ ದೇವರಾಜ್, ಎಸ್ ಪಿ, ಮಾದಕದ್ರವ್ಯ ನಿಗ್ರಹ ಪಡೆ
ಪದ್ಮಿನಿ ಸಾಹು – ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ
ಆರ್.ಶ್ರೀನಿವಾಸಗೌಡ – ಡಿಸಿಪಿ, ಸಿಸಿಬಿ-1 ಬೆಂಗಳೂರು
ಡಾ.ಶಿವಕುಮಾರ್ ಎಸ್ ಪಿ -ಕರ್ನಾಟಕ ಲೋಕಾಯುಕ್ತ
ಕುಶಲ್ ಚೌಕ್ಸೆ – ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು
ಸಾಹಿಲ್ ಬಾಗ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಪ್ಪಳ
ರೋಹನ್ ಜಗದೀಶ್ – ಎಸ್ ಪಿ, ಬೆಂಗಳೂರು ದಕ್ಷಿಣ ಜಿಲ್ಲೆ
ಹೆಚ್.ಎನ್.ಮಿಥುನ್, ಪೊಲೀಸ್ ವರಿಷ್ಠಾಧಿಕಾರಿ, ಗದಗ



