Kannada NewsKarnataka NewsLatest

*ಮರಳಿನ ಲಾರಿ ಚಾಲಕನಿಂದ ಲಂಚಕ್ಕೆ ಬೇಡಿಕೆ: 3 ಕಾನ್‌ಸ್ಟೇಬಲ್‌,ಹೋಮ್ ಗಾರ್ಡ್ ಲೋಕಾ ಬಲೆಗೆ* 

ಪ್ರಗತಿವಾಹಿನಿ ಸುದ್ದಿ: ಮರಳಿನ ಲಾರಿ ಸಂಚಾರಕ್ಕೆ ಅನುಮತಿ ನೀಡಲು ಲಂಚ  ಪಡೆಯುತ್ತಿದ್ದಾಗ ಮೂವರು ಹೆಡ್ ಕಾನ್‌ಸ್ಟೇಬಲ್‌, ಹೋಮ್ ಗಾರ್ಡ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಲ್ಲಿ ಮರಳು ಸಾಗಿಸುವ ಟಿಪ್ಪರ್ ಲಾರಿಯನ್ನು ಯಾವುದೇ ಅಡಚಣೆಯಿಲ್ಲದೆ ಓಡಿಸಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಟಿಪ್ಪರ್ ಚಾಲಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

Home add -Advt

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ, ಹೆಡ್ ಕಾನ್‌ಸ್ಟೇಬಲ್‌ಗಳಾದ ಹಸನ್‌ಸಾಬ್ ನದಾಫ್, ಇಮಾಮ್ ಅಕ್ತರ್, ಗಿರೀಶ್ ಮನ್ಸೂರ್ ಹಾಗೂ ಹೋಮ್ ಗಾರ್ಡ್ ಇಟ್ಬಾಲ್ ನದಾಫ್ ಅವರನ್ನು ರಂಗ್‌ಹಾಥ್ ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳು ಸಂಚರಿಸಲು ಅನುಮತಿ ನೀಡಲು ಒಟ್ಟು 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button