CrimeLatestNational

*ಪತ್ನಿಯ ರುಂಡ, ಬೆರಳು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ಪತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಪತ್ನಿಯನ್ನು ಆಕೆಯ ಪತಿಯೇ ಅತ್ಯಂತ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಆಸ್ಸಾಂನ ಗೌಹಾತಿಯಲ್ಲಿ ಈ ಭೀಕರ ಕೊಲೆ ಪ್ರಕರಣ ನಡೆದಿದೆ. ಪತ್ನಿಯ ತಲೆಯನ್ನು ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದಲ್ಲದೆ, ಆಕೆಯ ಬೆರಳುಗಳನ್ನೂ ಅರ್ಧಕ್ಕೆ ತುಂಡರಿಸಿದ ಘಟನೆ ದೇಶಾದ್ಯಂತ ದಿಗ್ಧಮೆ ಮೂಡಿಸಿದೆ.

Home add -Advt

ಕೊಲೆಯಾದ ದುರದೃಷ್ಟಕರ ಯುವತಿಯನ್ನು ರಿಯಾ ತಾಲ್ಲೂಕದಾರ್ ಎಂದು ಗುರುತಿಸಲಾಗಿದೆ. ಈ ದಂಪತಿ ಮದುವೆಯಾಗಿ ಕೆಲವೇ ತಿಂಗಳುಗಳು ಕಳೆದಿದ್ದು ಗೌಹಾತಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದರು. ದುರ್ನಾತದಿಂದ ಬೆಳಕಿಗೆ ಬಂದ ಘೋರ ಕೃತ್ಯ

ದಂಪತಿ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ತೀವ್ರ ದುರ್ನಾತ ಬರಲು ಪ್ರಾರಂಭಿಸಿತ್ತು. ಜೊತೆಗೆ ಕಳೆದ ಎರಡು ದಿನಗಳಿಂದ ದಂಪತಿ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅಲ್ಲದೆ ಅವರ ಮೊಬೈಲ್ ಫೋನ್‌ಗಳು ಸಹ ಸ್ವಿಚ್ ಆಫ್ ಆಗಿದ್ದವು. ಇದರಿಂದ ಅನುಮಾನಗೊಂಡ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಗೆ ಹಾಕಿದ್ದ ಬೀಗವನ್ನು ಒಡೆದು ಒಳಗೆ ಪ್ರವೇಶಿಸಿದಾಗ ಭೀಕರ ದೃಶ್ಯ ಕಂಡು ದಿಗ್ಧಮೆಗೊಂಡಿದ್ದಾರೆ. ಮನೆಯೊಳಗೆ ಮಹಿಳೆಯ ಹಡಗು ಕಟ್ಟಿದ ಮತ್ತು ಕೊಳೆತ ಸ್ಥಿತಿಯಲ್ಲಿದ್ದ ದೇಹ ಪತ್ತೆಯಾಗಿದೆ. ಆಕೆಯ ಕೈ ಬೆರಳುಗಳನ್ನು ಅರ್ಧಕ್ಕೆ ಕತ್ತರಿಸಲಾಗಿತ್ತು. ಆದರೆ ಆಕೆಯ ತಲೆ ಮಾತ್ರ ದೇಹದ ಮೇಲಿರಲಿಲ್ಲ. ತಕ್ಷಣವೇ ಪೊಲೀಸರು ಇಡೀ ಮನೆಯನ್ನು ಶೋಧಿಸಿದಾಗ, ಫ್ರಿಡ್ಜ್‌ನಲ್ಲಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಆಕೆಯ ಕತ್ತರಿಸಿದ ತಲೆ ಪತ್ತೆಯಾಗಿದೆ.

ಕೊಲೆ ನಡೆದ ನಂತರ ಆರೋಪಿ ಪತಿ ಪರಾರಿಯಾಗಿದ್ದ. ಆತನನ್ನು ಶುಕ್ರವಾರದ ಬಳಿಕ ಯಾರೂ ನೋಡಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಪೊಲೀಸರು ಮೃತದೇಹ ಮತ್ತು ಕತ್ತರಿಸಿದ ತಲೆಯನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಆರೋಪಿ ಪತಿಗಾಗಿ ಬಲೆ ಬೀಸಿದ್ದರು.

ತೀವ್ರ ಶೋಧ ಕಾರ್ಯ ನಡೆಯುತ್ತಿದ್ದಂತೆ, ಭಾನುವಾರ ರಾತ್ರಿ ಆರೋಪಿ ಪತಿ ಸ್ವತಃ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇಷ್ಟೊಂದು ಕ್ರೂರವಾಗಿ ಪತ್ನಿಯನ್ನು ಕೊಲೆ ಮಾಡಲು ಕಾರಣವೇನು ಎಂಬ ಮೂಲ ಉದ್ದೇಶವನ್ನು ಪೊಲೀಸರು ಇನ್ನು ಬಹಿರಂಗಪಡಿಸಿಲ್ಲ. ಬಂಧಿತ ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದ್ದು ಘಟನಾ ಸ್ಥಳದಲ್ಲಿ ಸಿಕ್ಕಿರುವ ಸಾಕ್ಷಾಧಾರಗಳೊಂದಿಗೆ ಅದನ್ನು ತಾಳೆ ನೋಡಲಾಗುತ್ತಿದೆ. ಘಟನೆಯ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಹತ್ಯೆ ನಡೆದ ಸನ್ನಿವೇಶಗಳೇನು ಎಂಬುದರ ಕುರಿತು ಸುದೀರ್ಘ ತನಿಖೆ ಮುಂದುವರಿದಿದೆ.

Related Articles

Back to top button