*ಅವರ ವಿದೇಶಿ ಹೂಡಿಕೆ ಬಗ್ಗೆ ಗೊತ್ತಿಲ್ಲ: ಸತೀಶ್ ಮೇಲಿನ ಇಡಿ ದಾಳಿ ಬಗ್ಗೆ ಲಖನ್ ಜಾರಕಿಹೊಳಿ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅವರ ಬಿಜಿನೆಸ್ ನನಗೆ ಗೊತ್ತಿಲ್ಲ. ಉದ್ಯಮದಲ್ಲಿ ಹೂಡಿಕೆ ಹಿನ್ನೆಲೆಯಲ್ಲಿ ದಾಳಿಯಾಗಿರಬಹದು ಎಂದು ಸಚಿವ ಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ಬಗ್ಗೆ ಸಹೋದರ, ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ ನಗರದಲ್ಲಿ ಲಖನ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಚಿವ ಸತೀಶ ಅವರು ಉದ್ಯಮದಲ್ಲಿ ಹೂಡಿಕೆ ಹಿನ್ನೆಲೆಯಲ್ಲಿ ದಾಳಿಯಾಗಿರಬಹದು. ಅವರ ಉದ್ಯಮದ ಬಗ್ಗೆ ಅವರು ದಾಖಲೆ ಸಲ್ಲಿಸುತ್ತಾರೆ ಎಂದರು.
ಎಸ್ ಟಿ ನಾಯಕರ ಟಾರ್ಗೆಟ್ ಮಾಡಿ ದಾಳಿ ಎನ್ನುವ ಕಾಂಗ್ರೆಸ್ ನಾಯಕರ ಆರೋಪ ವಿಚಾರ “ಇರಬಹುದು ಅದು ನನಗೆ ಗೊತ್ತಿಲ್ಲ. ಉದ್ಯಮ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಾಳಿಯಾಗಿರಬಹದು. ಇಡಿ ಅಧಿಕಾರಿಗಳು ದಾಳಿ ನಡೆಸುವದು ನಿರಂತರ ಪ್ರಕ್ರಿಯೆ. ಆ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಅವರೇ ಸ್ಪಷ್ಟನೆ ನೀಡುತ್ತಾರೆ. ವಿದೇಶದಲ್ಲಿ ಹೂಡಿಕೆ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಎಲ್ಲ ಆರೋಪಗಳಿಗೂ ಅವರೇ ದಾಖಲೆ ಸಹಿತ ಉತ್ತರ ನೀಡುತ್ತಾರೆ. ವಿದೇಶದಲ್ಲಿ ಹೂಡಿಕೆ, ಅವರ ಬಿಜಿನೆಸ್ ನನಗೆ ಗೊತ್ತಿಲ್ಲ ಎಂದರು.

