*BREAKING: ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗೆ ಮತ್ತೆ ಇಡಿ ಸಂಕಷ್ಟ*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಆರೋಪಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗೆ ಮತ್ತೆ ಜಾರಿ ನಿರ್ದೇಶನಾಲಯ-ಇಡಿ ಸಂಕಷ್ಟ ಎದುರಾಗಿದೆ.
ಸಿಬಿಐ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾಅರ್ ಅವರನ್ನು ಇಡಿ ಕಸ್ಟಡಿಗೆ ಕೇಳಿದ್ದರು. ಇದೀಗ ಕೋರ್ಟ್. ಜ್ಞಾನೇಂದ್ರ ಕುಮಾರ್ ಅವರನ್ನು 8 ದಿನ ಇಡಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.
ಕೋರ್ಟ್‌ನಲ್ಲಿ ಆರೋಪಿ ಜ್ಞಾನೇಂದ್ರ ಪರ ವಕೀಲರು, ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ಪಿಸಿಯೋಥೆರಪಿ ಅವಶ್ಯಕತೆ ಇದೆ. ವಿಚಾರಣೆ ಹೆಸರಲ್ಲಿ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ವಾದಿಸಿದರು. ಈ ವೇಳೆ ಇಡಿ ಪರ ವಾದಿಸಿದ ವಕೀಲರು, 2026ರ ಜನವರಿ 9 ರಂದು ಪರೀಕ್ಷೆ ನಡೆದಿದೆ. ಪರೀಕ್ಷೆಗೂ 6 ತಿಂಗಳು ಮೊದಲಿನಿಂದಲೂ ಹಣ ಸಂಗ್ರಹಿಸಲಾಗಿದೆ. ಬಸವರಾಜ್ ಕನ್ನಾಳೆ ಜೊತೆಗೆ ಚಿನ್ನಾಭರಣ ಖರೀದಿಗೆ ಹಣದ ವ್ಯವಹಾರ ಪ್ರಸ್ತಾಪವಾಗಿತ್ತು. ಜ್ಞಾನೇಂದ್ರ ಸೋದರ ಸಂಬಂಧಿ ಬ್ಯಾಂಕ್ ಅಕೌಂಟ್ ಮೂಲಕ ಹಣ ವರ್ಗಾವಣೆ ಆಗಿದೆ. ಅಪಾರ ಪ್ರಮಾಣದ ಅಕ್ರಮ ಹಣಕಾಸು ವರ್ಗಾವಣೆಯಾಗಿರುವ ಬಗ್ಗೆ ಕೋರ್ಟ್ ಗಮನ ಸೆಳೆದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಇಡಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇಡಿ ವಾದ ಆಲಿಸಿದ ಕೋರ್ಟ್ ಜ್ಞಾನೇಂದ್ರ ಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




