Film & EntertainmentKannada NewsKarnataka NewsLatest

*ಯುವ ದಸರಾಗೆ ಕೌಂಟ್‌ಡೌನ್‌*: *ಅ.17ರಂದು ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ರಸದೌತಣ*!

ಪ್ರಗತಿವಾಹಿನಿ ಸುದ್ದಿ: ಮೈಸೂರಿನಲ್ಲಿ ಯುವ ದಸರಾ-2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಐದು ದಿನಗಳ ಸಂಗೀತ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅಕ್ಟೋಬರ್ 13ರಿಂದ 17ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿದಿನ ಖ್ಯಾತ ಕಲಾವಿದರು ಸಂಗೀತ ರಸದೌತಣ ನೀಡಲಿದ್ದಾರೆ. ಕೊನೆಯ ದಿನವಾದ ಅಕ್ಟೋಬರ್ 17ರಂದು ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ.

ಯುವ ದಸರಾ ಮೊದಲ ದಿನ ಅಕ್ಟೋಬರ್ 13ರಂದು ಬಿ. ಅಜನೀಶ್ ಲೋಕನಾಥ್ ಮತ್ತು ತಂಡ ಕಾರ್ಯಕ್ರಮ ನಡೆಸಿಕೊಡಲಿದೆ. ಅಕ್ಟೋಬರ್ 14ರಂದು ಶಂಕರ್–ಎಹ್ಸಾನ್–ಲಾಯ್ ಹಾಗೂ ಅಕ್ಟೋಬರ್ 15ರಂದು ಸಿದ್ ಶ್ರೀರಾಮ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಹೀಗಾಗಿ ಪ್ರತಿದಿನವೂ ವಿಭಿನ್ನ ಸಂಗೀತ ಕಾರ್ಯಕ್ರಮಗಳ ಮೂಲಕ ಯುವ ದಸರಾ ಕಳೆಗಟ್ಟಲಿದೆ.

ಅಕ್ಟೋಬರ್ 16ರಂದು ಸ್ಯಾಂಡಲ್‌ವುಡ್ ನೈಟ್ಸ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್, ರಚಿತಾ ರಾಮ್ ಸೇರಿದಂತೆ ಹಲವು ಕಲಾವಿದರು ಹಾಗೂ ಗಾಯಕರು ಭಾಗವಹಿಸಲಿದ್ದಾರೆ. ಈ ಮೂಲಕ ಯುವ ದಸರಾ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ತಾರೆಯರ ಸಮ್ಮಿಲನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಇನ್ನು ಕೊನೆಯ ದಿನ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಸಂಗೀತ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಲಿದೆ. ಪೋಸ್ಟರ್‌ನಲ್ಲಿ ನೀಡಿರುವ ಮಾಹಿತಿಯಂತೆ ಅಕ್ಟೋಬರ್ 17ರಂದು ಸಂಜೆ 7.30ರಿಂದ ರಾತ್ರಿ 10.30ರವರೆಗೆ ಕಾರ್ಯಕ್ರಮ ನಡೆಯಲಿದೆ. ‘ಧುರಂಧರ್ 2’ ಚಿತ್ರದ ‘ಜಾಯೇ ಸಜನಾ’ ಹಾಡಿನ ಮೂಲಕ ಗಮನ ಸೆಳೆದಿರುವ ಜಾಸ್ಮಿನ್, ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಮೊದಲ ಬಾರಿಗೆ ಲೈವ್ ಪ್ರದರ್ಶನ ನೀಡಲಿದ್ದಾರೆ.

ಯುವ ದಸರಾ ಕಾರ್ಯಕ್ರಮಗಳು ಮೈಸೂರಿನ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪದ 100 ಎಕರೆ ಪ್ರದೇಶದಲ್ಲಿ ನಡೆಯಲಿವೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಅಕ್ಟೋಬರ್ 13ರಿಂದ 17ರವರೆಗೆ ಮೈಸೂರಿನಲ್ಲಿ ಸಂಗೀತ ಸಂಭ್ರಮ ಮನೆಮಾಡಲಿದೆ.

*ರಕುಲ್ ಪ್ರೀತ್ ಸಿಂಗ್ ಗೆ ಐಟಿ ಶಾಕ್* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button