Karnataka NewsLatestPolitics

*ರಾಜ್ಯದ ಜನತೆಗೆ ಡಬಲ್ ಶಾಕ್ ನೀಡಲು ಮುಂದಾದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ರಾಅಜ್ಯದ ಜನೆತೆ ಡಬಲ್ ಶಾಕ್ ನೀಡಲು ಮುಂದಾಗಿದೆಯೇ? ಎಂಬ ಪ್ರಶ್ನೆ ಮೂಡಿದೆ.

ನಾಳೆ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ವಿಚಾರವಾಗಿ ಚರ್ಚೆ ನಡೆಯಲಿದೆ.

ಹಾಲಿನ ದರ ಏರಿಕೆ ಮಾಡಲೇಬೇಕು ಎಂದು ಕಳೆದ ವಾರ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಾಲು ಒಕ್ಕೂಟದ ಅಧ್ಯಕ್ಷರು ಮನವಿ ಮಾಡಿದ್ದರು. ಹಸು ಸಾಕಾಣಿಕೆ ವೆಚ್ಚ ಸೇರಿ ಹೆಚ್ಚುವರಿ ಹೊರೆ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯ. ಹೀಗಾಗಿ ಪ್ರತೀ ಲೀಟರ್​​ಗೆ 8 ರಿಂದ 12 ರೂಪಾಯಿ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದವು.

ಮತ್ತೊಂದೆಡೆ ಹಾಲಿನ ದರದ ಜೊತೆ ಬಸ್ ಪ್ರಯಾಣ ದರದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಕಳೆದ 2 ವರ್ಷಗಳಿಂದ ಪ್ರಯಾಣ ದರ ಏರಿಕೆ ಮಾಡಿಲ್ಲ. ಡೀಸೆಲ್ ಬೆಲೆ ಹೆಚ್ಚಳದಿಂದ 4 ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ದರ ಏರಿಕೆ ಅನಿವಾರ್ಯ ಎಂದು ಸಚಿವ ಭೈರತಿ ಸುರೇಶ್​​ ಕೂಡ ಹೇಳಿದ್ದರು. ಹೀಗಾಗಿ ಈ ಎರಡೂ ವಿಚಾರಗಳ ಬಗ್ಗೆ ನಾಳೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button