Kannada NewsKarnataka NewsLatestWorld

*ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ ಗಾಯಕನ ಗೌರವ*: *ಹನುಮಾನ್ ಚಾಲೀಸಾ ಹಾಡಿದ ಬೆನ್ ರೈವಿಟ್ಜ್*

ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯದ ಕಥೆ ಇದೀಗ ಭಾರತ ಮಾತ್ರವಲ್ಲ, ಇಸ್ರೇಲ್‌ನಲ್ಲೂ ಗಮನ ಸೆಳೆಯುತ್ತಿದೆ. ವಿಮಾನದಲ್ಲಿನ ದಾಳಿ ವೇಳೆ ತಾವು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ಸ್ಮಿತ್ ಹೇಳಿಕೊಂಡಿದ್ದ ಮಾತು ಇಸ್ರೇಲಿ ಗಾಯಕ ಬೆನ್ ರೈವಿಟ್ಜ್ ಅವರನ್ನು ಪ್ರೇರೇಪಿಸಿದೆ.

ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಗೌರವ ಸೂಚಿಸುವ ರೀತಿಯಲ್ಲಿ ಬೆನ್ ರೈವಿಟ್ಜ್ ಹನುಮಾನ್ ಚಾಲೀಸಾ ಹಾಡಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವಿಡಿಯೋ ಸಾಕಷ್ಟು ಗಮನ ಸೆಳೆಯುತ್ತಿದೆ.

ವಿಮಾನದಲ್ಲಿ ಅಪಾಯಕಾರಿ ಪರಿಸ್ಥಿತಿ ಎದುರಾದರೂ ಕರ್ತವ್ಯದಿಂದ ಹಿಂದೆ ಸರಿಯದೆ ಪ್ರಯಾಣಿಕರ ಸುರಕ್ಷತೆಗಾಗಿ ಹೋರಾಡಿದ ಸ್ಮಿತ್ ಅವರ ಧೈರ್ಯವನ್ನು ಗೌರವಿಸುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ̤

ಸಂಕಷ್ಟದ ಕ್ಷಣದಲ್ಲಿ ಸ್ಮಿತ್ ಹನುಮಾನ್ ಚಾಲೀಸಾ ಪಠಿಸಿದ್ದಾಗಿ ಹೇಳಿಕೊಂಡಿದ್ದರು. ಆಧ್ಯಾತ್ಮಿಕ ನಂಬಿಕೆಯೊಂದಿಗೆ ಸಂಕಷ್ಟ ಎದುರಿಸಿದ ಈ ಮಾತು ಬೆನ್ ರೈವಿಟ್ಜ್ ಅವರ ಗಮನ ಸೆಳೆದಿದ್ದು, ಅದೇ ಹಿನ್ನೆಲೆಯಲ್ಲಿ ವಿಶೇಷ ಗೌರವ ಸಲ್ಲಿಸಿದ್ದಾರೆ.

ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಸ್ತೋತ್ರಗಳಲ್ಲಿ ಒಂದಾದ ಹನುಮಾನ್ ಚಾಲೀಸಾವನ್ನು ಇಸ್ರೇಲಿ ಗಾಯಕ ಹಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿದೆ. ಸ್ಮಿತ್ ಮಚ್ಚಾರ್ ಅವರ ಕಥೆ ದೇಶದ ಗಡಿಗಳನ್ನು ದಾಟಿ ತಲುಪಿರುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರಿಂದಲೂ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸ್ಮಿತ್ ಅವರ ಧೈರ್ಯ ಹಾಗೂ ಬೆನ್ ರೈವಿಟ್ಜ್ ಗೌರವ ಸಲ್ಲಿಸಿರುವ ರೀತಿಯನ್ನು ಹಲವರು ಮೆಚ್ಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ವಿಮಾನದಲ್ಲಿನ ಭೀಕರ ದಾಳಿಯ ಸಂದರ್ಭದಲ್ಲಿ ಸ್ಮಿತ್ ಮಚ್ಚಾರ್ ತೋರಿದ ಧೈರ್ಯ ಇದೀಗ ಇಸ್ರೇಲಿ ಕಲಾವಿದನೊಬ್ಬನನ್ನೂ ಪ್ರೇರೇಪಿಸಿದೆ. ಹನುಮಾನ್ ಚಾಲೀಸಾ ಮೂಲಕ ಸಲ್ಲಿಸಿರುವ ಈ ಗೌರವ ಎರಡು ದೇಶಗಳ ನಡುವಿನ ಭಾವನಾತ್ಮಕ ಸಂಪರ್ಕದ ಸಂಕೇತವಾಗಿ ಗಮನ ಸೆಳೆಯುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button