Kannada NewsKarnataka NewsLatest

*ಆನ್‌ಲೈನ್ ಗೇಮ್ ಗೆ ಹಣಕ್ಕಾಗಿ ಒತ್ತಾಯ: ಸ್ನೇಹಿತರ ಕಾಟ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಬಾಲಕ*

ಪ್ರಗತಿವಾಹಿನಿ ಸುದ್ದಿ: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಸ್ನೇಹಿತರು ಗೇಮ್ ಆಡಲು ಹಣ ತರುವಂತೆ ಹಿಂಸಿಸುತ್ತಿದ್ದ ಕಾರಣಕ್ಕೆ ಮನನೊಂದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ಈ ಘಟನೆ ನಡೆದಿದೆ. ಮನೋಜ್ ಟಿ.ಆರ್ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಗ್ರಾಮದ ನಾಲ್ವರು ಬಾಲಕರು ಫ್ರೀ ಫೈರ್ ಗೇಮ್ ಆಪ್‌ನಲ್ಲಿ ಹಣ ಹಾಕುವಂತೆ ಒತ್ತಾಯಿಸಿದ್ದರು. ಹಣ ತರದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದೇ ಕಾರಣಕ್ಕೆ ನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಸ್ನೇಹಿತರು ಒತ್ತಾಯಕ್ಕೆ ಮನೆಯಿಂದ ಸುಮಾರು 4 ಲಕ್ಷ ರೂ. ಹಣವನ್ನು ಮನೋಜ್‌ ತೆಗೆದುಕೊಂಡುಹೋಗಿದ್ದ. ಮನೆಯಲ್ಲಿ ಇಟ್ಟಿದ್ದ ಹಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ಪರಿಶೀಲನೆ ನಡೆಸಿದಾಗ ನಾಲ್ವರು ಹಣ ತರುವಂತೆ ಒತ್ತಾಯಿಸಿತ್ತಿದ್ದರು ಎಂದು ತಿಳಿಸಿದ್ದ. ಅಲ್ಲದೇ ಹಣಕ್ಕಾಗಿ ಮಗನ ಮೇಲೆ ಹಲ್ಲೆ ಸಹ ಮಾಡಿದ್ದರು ಎಂದು ತಿಳಿಸಿದ್ದಾರೆ.

ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button