*ನಂದಿನಿ ಮಿಲ್ಕ್ ಪೌಡರ್ ಕಲಬೆರಕೆ ಆರೋಪಕ್ಕೆ ತೆರೆ*: *ಲ್ಯಾಬ್ ವರದಿಯಲ್ಲಿ ಸುರಕ್ಷಿತ ಎಂದು ದೃಢ!*

ಪ್ರಗತಿವಾಹಿನಿ ಸುದ್ದಿ: ನಂದಿನಿ ಮಿಲ್ಕ್ ಪೌಡರ್ನಲ್ಲಿ ಕಲಬೆರಕೆಯಾಗಿದೆ ಎಂಬ ಆರೋಪದ ಬೆನ್ನಲ್ಲೇ ಇದೀಗ ಪ್ರಯೋಗಾಲಯದ ವರದಿ ಹೊರಬಂದಿದೆ. ವರದಿಯ ಪ್ರಕಾರ, ಪರೀಕ್ಷೆಗೆ ಕಳುಹಿಸಲಾಗಿದ್ದ ಹಾಲಿನ ಪುಡಿಯ ಮಾದರಿ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ನಂದಿನಿ ಮಿಲ್ಕ್ ಪೌಡರ್ ಗುಣಮಟ್ಟದ ಕುರಿತು ಎದ್ದಿದ್ದ ಅನುಮಾನಗಳಿಗೆ ವರದಿ ಮಹತ್ವದ ಸ್ಪಷ್ಟನೆ ನೀಡಿದೆ.
ನಂದಿನಿ ಮಿಲ್ಕ್ ಪೌಡರ್ನಲ್ಲಿ ಕಲಬೆರಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಈ ಹಿಂದೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಲಿನ ಪುಡಿಯ ಗುಣಮಟ್ಟವನ್ನು ಪರೀಕ್ಷಿಸುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದರು.
ಸಚಿವರ ಸೂಚನೆಯ ಬಳಿಕ ಸೆಪ್ಟೆಂಬರ್ 26ರಂದು ಕೆಎಂಎಫ್ ಡೈರಿಗಳಿಂದ ಮಿಲ್ಕ್ ಪೌಡರ್ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವಾದ ಎಫ್ಎಸ್ಎಸ್ಎಐಗೆ ಕಳುಹಿಸಲಾಗಿತ್ತು.
ಇದೀಗ ಪ್ರಯೋಗಾಲಯದ ವರದಿ ಬಂದಿದ್ದು, ಪರೀಕ್ಷಿಸಲಾದ ಮಾದರಿ ಸುರಕ್ಷಿತವಾಗಿದೆ ಎಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ. ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ಗುಣಮಟ್ಟದ ಪರಿಶೀಲನೆಯ ಫಲಿತಾಂಶ ಹೊರಬಂದಿರುವುದು ಗಮನ ಸೆಳೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



