
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡದ ನಡುವೆ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಎಂಆರ್ ಸಿ ಎಲ್ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದೆ. ಮಧ್ಯರಾತ್ರಿ 1.15ರ ವರೆಗೂ ಮೆಟ್ರೋ ರೈಲು ಸಂಚಾರ ನಡೆಸಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಟಿ-20 ಪಂದ್ಯ ಕ್ರಿಕೆಟ್ ಪಂದ್ಯ ಹಿನ್ನೆಲೆಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲವಾಗಲೆಂದು ರಾತ್ರಿ 1.15ರ ವರೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ವೈಟ್ ಫೀಲ್ಡ್ನಿಂದ ರಾತ್ರಿ 12 ಗಂಟೆಗೆ ಕೊನೆಗೆ ರೈಲು ಸಂಚಾರ ಬಂದ್ ಆಗಲಿದೆ.
ರೇಷ್ಮೆ ಸಂಸ್ಥೆ, ಮಾದವಾರದಿಂದ 12:15 ಕ್ಕೆ ಕೊನೆ ರೈಲು ಸಂಚಾರ
ಬೊಮ್ಮಸಂದ್ರದಿಂದ ರಾತ್ರಿ 12 ಗಂಟೆಗೆ ಕೊನೆಯ ರೈಲು ಸಂಚಾರ
ಆರ್. ವಿ. ರಸ್ತೆಯಿಂದ ರಾತ್ರಿ 1:30 ಕ್ಕೆ ಕೊನೆಯ ರೈಲು ಸಂಚಾರ
ಮೆಜೆಸ್ಟಿಕ್ ನಿಲ್ದಾಣದಿಂದ ರಾತ್ರಿ 1 ಗಂಟೆಗೆ ಕೊನೆ ರೈಲು ಸಂಚಾರ
QR ಕೋಡ್ ವ್ಯವಸ್ಥೆ:
ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ, ಮೆಜೆಸ್ಟಿಕ್ನಿಂದ ನೇರಳೆ ಮೆಟ್ರೋ ಮಾರ್ಗದಲ್ಲಿ ಸೇವೆ ರಾತ್ರಿ 1 ಗಂಟೆಗೆ ಕೊನೆ ಆಗಲಿದೆ. ನಮ್ಮ ಮೆಟ್ರೋ ಪ್ರಯಾಣ ಸುಗಮಗೊಳಿಸಲು QR ಕೋಡ್ ಟಿಕೆಟ್ ನೀಡಲಾಗಿದೆ. QR ಕೋಡ್ ಅನ್ನು ಡಿಜಿಟಲ್ ಟಿ-20 ಪಂದ್ಯದ ಟಿಕೆಟ್ಗಳಲ್ಲಿ ಅಳವಡಿಕೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



