
ಪ್ರಗತಿವಾಹಿನಿ ಸುದ್ದಿ: ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಯುವ ಮುನ್ನ ವ್ಯಕ್ತಿ ತನ್ನ ಮೊಬೈಲ್ನಲ್ಲಿ ಮಾಡಿದ್ದ ವಾಯ್ಸ್ ರೆಕಾರ್ಡ್ ಸಾವಿನ ಕಾರಣ ಬಿಚ್ಚಿಟ್ಟಿದೆ.
ಗ್ರೇಟರ್ ನೋಯ್ಡಾದಲ್ಲಿ ಮೂರು ಮಕ್ಕಳು ಸೇರಿ ಒಂದೇ ಕುಟುಂದಬ ಐವರು ಸಾವನ್ನಪ್ಪಿದ ಪ್ರಕರಣ ನಡೆದಿತ್ತು. ಮೃತ ವ್ಯಕ್ತಿಯ ಇಬ್ಬರು ಸಹೋದರಿಯರು ಮತ್ತು ಸೋದರ ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಗಾಗಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ರಬುಪುರದ ನಾಗ್ಲಾ ಶ್ರೀ ಪದಂ ಗ್ರಾಮದಲ್ಲಿರುವ ಮನೆಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಶವವಾಗಿ ಪತ್ತೆಯಾದ 37 ವರ್ಷದ ಮಹೇಶ್, ಸಾವಿಗೆ ಮುನ್ನ ತಮ್ಮ ಮೊಬೈಲ್ ಫೋನ್ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಟ್ಟಿದ್ದರು. ನಮ್ಮೆಲ್ಲರ ಸಾವಿಗೆ ತನ್ನ ಇಬ್ಬರು ಸಹೋದರಿಯರು ಮತ್ತು ಸೋದರ ಮಾವ ಕಾರಣ ಎಂದು ರೆಕಾರ್ಡಿಂಗ್ನಲ್ಲಿ ಹೇಳಿದ್ದಾರೆ.
ಆಸ್ತಿ ವಿಚಾರವಾಗಿ ಸಹೋದರಿಯರೊಂದಿಗೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ನಡೆಯುವ ಹಿಂದಿನ ರಾತ್ರಿ ಕುಟುಂಬವು ನೂಡಲ್ಸ್ ತಿಂದಿದ್ದರಿಂದಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿವೆ. ಮೃತರ ಅಂಗಾಂಗಗಳನ್ನು ಸಂರಕ್ಷಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಸದ್ಯ ಮೃತ ಮಹೇಶ್ನ ಬಾವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




