Kannada NewsKarnataka NewsLatest

*ಮಾಂಜಾ ದಾರದಿಂದ ಸಾಲು ಸಾಲು ಅನಾಹುತ*:* ಬೈಕ್ ಸವಾರನ ಮೂಗು ಕಟ್*

ಪ್ರಗತಿವಾಹಿನಿ ಸುದ್ದಿ: ಗಾಳಿಪಟ ಹಾರಿಸುವ ಮಾಂಜಾ ದಾರ ರಾಜ್ಯದಲ್ಲಿ ನಿಷೇಧವಾಗಿದ್ದರೂ ಕೂಡ ಮಾಂಜಾ ದಾರದ ಬಳಕೆ ಹೆಚ್ಚುತ್ತಿದ್ದು, ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ.

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದ್ದು, ಇದರ ಬೆನ್ನಲ್ಲೇ ಇಂದೂ ಕೂಡ ಮಾಂಜಾ ದಾರದ ಹಾವಳಿಗೆ ವ್ಯಕ್ತಿಯೊಬ್ಬರ ಮೂಗು ಕಟ್ ಆಗಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಕೌಲ್ ಪೇಟೆ ಬಳಿ ಮಾಂಜಾ ದಾರ ತಗುಲಿ ಬೈಕ್ ಸವಾರನ ಮೂಗು ಕಟ್ ಆಗಿದೆ. ಮೂಗಿನಿಂದ ರಕ್ತ ಸೋರುತ್ತಿದ್ದು, ಗಾಯಾಳು ನಡುರಸ್ತೆಯಲ್ಲಿಯೇ ನರಳಾಟ ನಡೆಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇನ್ನು ನಿನ್ನೆ ನಡೆದಿದ್ದ ಮಾಂಜಾ ದಾರದ ಘಟನೆಯಲ್ಲಿ ಮಹಿಳೆ ಬಲಿ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 500ಕ್ಕೂ ಹೆಚ್ಚು ಮಾಂಜಾ ರೋಲ್ ಗಳನ್ನು ಜಪ್ತಿ ಮಾಡಲಾಗಿದೆ. 12 ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button