Karnataka NewsLatestTravel

*10 ರೈಲುಗಳು ರದ್ದು*: *3 ದಿನ 15 ರೈಲು ಮಾರ್ಗಗಳಲ್ಲಿ ಸಂಚಾರ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 26 ರಿಂದ 28 ರವರೆಗೆ 10 ರೈಲುಗಳ ಸಂಚಾರ ರದ್ದಾಗಲಿದ್ದು, 15 ರೈಲುಗಳು ಮಾರ್ಗ ಬದಲಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ನಿಲ್ದಾಣಗಳ ಲೆವೆಲ್ ಕ್ರಾಸಿಂಗ್ ಗೇಟ್ ನಂ. 88 ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಕೆ ಕಾಮಗಾರಿಗಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯವಗಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರದ್ದುಗೊಂಡ ರೈಲುಗಳು:
16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 26.10.2026
16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 27.10.2026
56224 ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 27.10.2026
56229 ಕೆಎಸ್‌ಆರ್ ಬೆಂಗಳೂರು – ಚನ್ನಪಟ್ಟಣ ಪ್ಯಾಸೆಂಜರ್ 27.10.2026
56230 ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 27.10.2026
56223 ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್ 27.10.2026
66577 ತುಮಕೂರು – ಶಿವಮೊಗ್ಗ ಟೌನ್ ಮೆಮು 28.10.2026
66578 ಶಿವಮೊಗ್ಗ ಟೌನ್ – ತುಮಕೂರು ಮೆಮು 28.10.2026
66505 ಯಲಹಂಕ – ಅರಸೀಕೆರೆ ಮೆಮು 28.10.2026
66506 ಅರಸೀಕೆರೆ – ಯಲಹಂಕ ಮೆಮು 28.10.2026

ಮಾರ್ಗ ಬದಲಾವಣೆ ರೈಲುಗಳು:
ಮಾರ್ಗ ಬದಲಾವಣೆಗೊಂಡ ರೈಲುಗಳು
16546 ಸಿಂಧನೂರು – ಯಶವಂತಪುರ ಎಕ್ಸ್‌ಪ್ರೆಸ್ 26.10.2026 ಅರಸೀಕೆರೆ – ಹಾಸನ – ನೆಲಮಂಗಲ – ಚಿಕ್ಕಬಾಣಾವರ ತಿಪಟೂರು, ಅಮ್ಮಸಂದ್ರ, ಗುಬ್ಬಿ, ತುಮಕೂರು, ಕ್ಯಾತಸಂದ್ರ ಮತ್ತು ದೊಡ್ಡಬೆಲೆ
19667 ಉದಯಪುರ ಸಿಟಿ – ಮೈಸೂರು ಎಕ್ಸ್‌ಪ್ರೆಸ್ 26.10.2026 ದಾವಣಗೆರೆ – ಅರಸೀಕೆರೆ – ಹಾಸನ – ನೆಲಮಂಗಲ – ಕೆಎಸ್‌ಆರ್ ಬೆಂಗಳೂರು –
12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ 27.10.2026 ಅರಸೀಕೆರೆ – ಹಾಸನ – ನೆಲಮಂಗಲ – ಯಶವಂತಪುರ ತಿಪಟೂರು ಮತ್ತು ತುಮಕೂರು
56519 ಕೆಎಸ್‌ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ 27.10.2026 & 28.10.2026 ಚಿಕ್ಕಬಾಣಾವರ – ನೆಲಮಂಗಲ – ಹಾಸನ – ಅರಸೀಕೆರೆ ದೊಡ್ಡಬೆಲೆ, ಕ್ಯಾತಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ ಮತ್ತು ತಿಪಟೂರು
11006 ಪುದುಚೇರಿ – ದಾದರ್ ಎಕ್ಸ್‌ಪ್ರೆಸ್ 27.10.2026 ಚಿಕ್ಕಬಾಣಾವರ – ನೆಲಮಂಗಲ – ಹಾಸನ – ಅರಸೀಕೆರೆ ತುಮಕೂರು ಮತ್ತು ತಿಪಟೂರು
12079 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ 28.10.2026 ಯಶವಂತಪುರ – ನೆಲಮಂಗಲ – ಹಾಸನ – ಅರಸೀಕೆರೆ ತುಮಕೂರು ಮತ್ತು ತಿಪಟೂರು

ವಿಳಂಬವಾಗಿ ಹೊರಡುವ ರೈಲುಗಳು:
17310 ವಾಸ್ಕೋ ಡ ಗಾಮ – ಯಶವಂತಪುರ ಎಕ್ಸ್‌ಪ್ರೆಸ್ ವಾಸ್ಕೋ ಡ ಗಾಮ 27.10.2026 ನಿಗದಿತ ಸಮಯಕ್ಕಿಂತ 120 ನಿಮಿಷ ತಡವಾಗಿ ನಿರ್ಗಮನ
20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ತಾಳಗುಪ್ಪ 28.10.2026 ನಿಗದಿತ ಸಮಯಕ್ಕಿಂತ 140 ನಿಮಿಷ ತಡವಾಗಿ ನಿರ್ಗಮನ
16239 ಚಿಕ್ಕಮಗಳೂರು – ಯಶವಂತಪುರ ಎಕ್ಸ್‌ಪ್ರೆಸ್ ಚಿಕ್ಕಮಗಳೂರು 28.10.2026 ನಿಗದಿತ ಸಮಯಕ್ಕಿಂತ 60 ನಿಮಿಷ ತಡವಾಗಿ ನಿರ್ಗಮನವಾಗಲಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button