Kannada NewsKarnataka NewsLatest

*ಸೌಜನ್ಯ ಕೊಲೆ ಪ್ರಕರಣಕ್ಕೆ ಮರುತನಿಖೆ*: *ಧರ್ಮಸ್ಥಳದ ಕಾಡಿನಲ್ಲಿ ಎಸ್‌ಐಟಿ ಮಹತ್ವದ ಕಾರ್ಯಾಚರಣೆ*

ಪ್ರಗತಿವಾಹಿನಿ ಸುದ್ದಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಮತ್ತೆ ಚುರುಕುಗೊಂಡಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಸ್ಥಳ ಪರಿಶೀಲನೆ ನಡೆಸಿದೆ. ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಘಟನೆಯ ಮರುಸೃಷ್ಟಿ ಮಾಡಲಾಗಿದೆ. ತನಿಖಾಧಿಕಾರಿಗಳು ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆ 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಮತ್ತೆ ಮಹತ್ವದ ತಿರುವು ನೀಡಿದೆ.

ಎಸ್‌ಐಟಿ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತಂಡದೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದರು. ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಜಾಗವನ್ನು ಕುಟುಂಬಸ್ಥರು ಅಧಿಕಾರಿಗಳಿಗೆ ತೋರಿಸಿದ್ದಾರೆ. ಈ ಪರಿಶೀಲನೆ ಧರ್ಮಸ್ಥಳದ ಮಣ್ಣಸಂಕದ ಕಾಡಿನಲ್ಲಿ ನಡೆದಿದೆ.

ಸೌಜನ್ಯ ಅವರ ಮಾವ ಪುರಂದರಗೌಡ ಹಾಗೂ ಸಂಬಂಧಿ ತುಕಾರಾಂ ಅವರಿಂದ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಯ ಸಂದರ್ಭ ಮತ್ತು ಸ್ಥಳಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಂಡಿದ್ದಾರೆ.

ಇನ್ನು ಕಾರ್ಯಾಚರಣೆಯಲ್ಲಿ ಎಸ್‌ಒಸಿಒ ತಂಡ, ಬೆಂಗಳೂರು ಎಫ್‌ಎಸ್‌ಎಲ್ ತಂಡ, ಗ್ರಾಮ ಆಡಳಿತಾಧಿಕಾರಿ, ಪಂಚರು, ವೈದ್ಯರು ಹಾಗೂ ಫೋಟೊ ಮತ್ತು ವಿಡಿಯೋ ತಂಡದ ಸಿಬ್ಬಂದಿ ಭಾಗವಹಿಸಿದ್ದರು.

14 ವರ್ಷಗಳ ಹಿಂದಿನ ಪ್ರಕರಣದ ಮರುತನಿಖೆಯಲ್ಲಿ ಸ್ಥಳ ಪರಿಶೀಲನೆ ಮತ್ತು ಘಟನೆಯ ಮರುಸೃಷ್ಟಿ ಮಹತ್ವ ಪಡೆದುಕೊಂಡಿದ್ದು, ಎಸ್‌ಐಟಿ ಮುಂದಿನ ಹಂತದಲ್ಲಿ ಯಾವ ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂಬ ಕುತೂಹಲ ಮೂಡಿದೆ.

Related Articles

Back to top button