*ಮನಿಷ್ ಮಲ್ಹೋತ್ರಾ ಪಾರ್ಟಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯಾ–ಅಭಿಷೇಕ್*: *ಡಿವೋರ್ಸ್ ವದಂತಿಗೆ ಬ್ರೇಕ್*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ನಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ತಾರೆಯರು ಅದ್ಧೂರಿ ಪಾರ್ಟಿಗಳಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ಬಹಳ ದಿನಗಳ ಬಳಿಕ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇಬ್ಬರೂ ಕ್ಯಾಮೆರಾಗೆ ಜೊತೆಯಾಗಿ ಪೋಸ್ ನೀಡಿದ್ದು, ಈ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಖ್ಯಾತ ಫ್ಯಾಷನ್ ಡಿಸೈನರ್ ಮನಿಷ್ ಮಲ್ಹೋತ್ರಾ ಗುರುವಾರ ಸಂಜೆ ಆಯೋಜಿಸಿದ್ದ ವಾರ್ಷಿಕ ದೀಪಾವಳಿ ಪಾರ್ಟಿಯಲ್ಲಿ ಈ ಜೋಡಿ ಭಾಗವಹಿಸಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ವಿಮಾನ ನಿಲ್ದಾಣದಲ್ಲಿ ಕೆಲವೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಒಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡಿರುವುದು ಬಹಳ ದಿನಗಳ ಬಳಿಕ ಎನ್ನಲಾಗಿದೆ.
ಇನ್ನು, ಈ ಅದ್ಧೂರಿ ದೀಪಾವಳಿ ಪಾರ್ಟಿಗೆ ಬಾಲಿವುಡ್ನ ಹಲವು ಖ್ಯಾತ ತಾರೆಯರು ಆಗಮಿಸಿದ್ದರು. ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಮತ್ತು ಪುತ್ರ ಆರವ್ ಜೊತೆ ಭಾಗವಹಿಸಿದ್ದರು. ಗೌರಿ ಖಾನ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಶಾರುಖ್ ಖಾನ್ ಕಾಣಿಸಿಕೊಂಡಿರಲಿಲ್ಲ. ಮಗಳು ಸುಹಾನಾ ಖಾನ್ ಪ್ರತ್ಯೇಕವಾಗಿ ಆಗಮಿಸಿ ಕ್ಯಾಮೆರಾಗೆ ಪೋಸ್ ನೀಡಿದರು.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪರಿಣಿತಿ ಚೋಪ್ರಾ ತಮ್ಮ ಪತಿ ರಾಘವ್ ಚಡ್ಡಾ ಜೊತೆ ಕಾಣಿಸಿಕೊಂಡರೆ, ಸೊನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಕೂಡ ಒಟ್ಟಿಗೆ ಫೋಟೋಗಳಿಗೆ ಪೋಸ್ ನೀಡಿದರು. ಗಾಯಕಿ ಕನಿಕಾ ಕಪೂರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಲ್ಲದೆ, ಕಾಜೋಲ್, ಕರಿಷ್ಮಾ ಕಪೂರ್, ಸೋನಾಲಿ ಬೇಂದ್ರೆ, ಶಾನಯಾ ಕಪೂರ್, ತಮನ್ನಾ ಭಾಟಿಯಾ, ಮಲೈಕಾ ಅರೋರಾ, ಶಿಲ್ಪಾ ಶೆಟ್ಟಿ ಮತ್ತು ವಿಕಿ ಕೌಶಲ್ ಸೇರಿದಂತೆ ಹಲವು ತಾರೆಯರು ಪಾರ್ಟಿಯ ಮೆರುಗು ಹೆಚ್ಚಿಸಿದರು.
ಒಟ್ಟಾರೆ, ಮನಿಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರೂ, ಬಹಳ ದಿನಗಳ ಬಳಿಕ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆಯಾಗಿ ಕಾಣಿಸಿಕೊಂಡಿರುವುದೇ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.




