Kannada NewsKarnataka NewsLatestTravel

*8 ರೈಲುಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷ ಸಮೀಪಿಸುತ್ತಿದೆ. ಹೊಸ ವರ್ಷಕ್ಕೆ ಗೋವಾಗೆ ಟ್ರಿಪ್ ಹೋಗಲು ಬಹುತೇಕ ಜನರು ರೈಲನ್ನು ಆಯ್ಕೆ ಮಡಿಕೊಳ್ಳುವುದು ಹೆಚ್ಚು. ಹಾಗೊಂದು ವೇಳೆ ಹೊಸ ವರ್ಷಕ್ಕೆ ಗೋವಾ ಪ್ರವಾಸಕ್ಕೆ ರೈಲು ಅವಲಂಭಿಸುವವರು ಈ ಸುದ್ದಿ ನೋಡಲೇಬೇಕು.

ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 8 ರೈಲುಗಳ ಸಂಚಾರ ರದ್ದಾಗಲಿವೆ. ಗೋವಾದ ಕ್ಯಾಸಲ್ ರಾಕ್ ಮತ್ತು ಕುಲೆಮ್ ರೈಲ್ವೆ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹಳಿ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮುಂಚಿತವಾಗಿ ಮಾಹಿತಿ ನೀಡಿದೆ.

ಕ್ಯಾಸಲ್ ರಾಕ್ ಮತ್ತು ಕುಲೆಮ್ ರೈಲ್ವೆ ಮಾರ್ಗದಲ್ಲಿ ಚಲಿಸುವ ಡೆಮು (DEMU) ರೈಲು ಸೇವೆ ಸಂಪೂರ್ಣ ರದ್ದಾಗಲಿದ್ದು, ಶಾಲೀಮಾರ್, ತಿರುಪತಿ ಹಾಗೂ ಸಿಕಂದರಾಬಾದ್‌ನಿಂದ ಗೋವಾ (ವಾಸ್ಕೋ ಡ ಗಾಮ) ಕಡೆಗೆ ತೆರಳುವ 8 ಪ್ರಮುಖ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಾಸ್ಕೋ ಡ ಗಾಮ ಮತ್ತು ಕುಲೆಮ್ ನಡುವಿನ ಡೆಮು ರೈಲು ಸೇವೆ (56964/56963) ಡಿಸೆಂಬರ್ 1, 2026 ರಿಂದ ಜನವರಿ 20, 2027 ರವರೆಗೆ ಸಂಪೂರ್ಣವಾಗಿ ರದ್ದಾಗಲಿದೆ.

ಭಾಗಶಃ ರದ್ದಾಗುವ ರೈಲುಗಳು:

ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೂರನೇ ವಾರದವರೆಗೆ ಈ ಕೆಳಗಿನ ರೈಲುಗಳು ವಾಸ್ಕೋ ಡ ಗಾಮ ಬದಲಿಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ ಹಾಗೂ ಅಲ್ಲಿಂದಲೇ ಮರಳಿ ಹೊರಡಲಿವೆ.

ಶಾಲೀಮಾರ್-ವಾಸ್ಕೋ ಡ ಗಾಮ ಅಮರಾವತಿ ಎಕ್ಸ್‌ಪ್ರೆಸ್ (18047/18048):
ರೈಲು ಸಂಖ್ಯೆ 18047: 2026ರ ನವೆಂಬರ್ 28 ರಿಂದ 2027ರ ಜನವರಿ 18 ರವರೆಗೆ ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ.

ರೈಲು ಸಂಖ್ಯೆ 18048 (ಮರುಪ್ರಯಾಣ): ವಾಸ್ಕೋ ಬದಲಿಗೆ ಹುಬ್ಬಳ್ಳಿ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಹೊರಡಲಿದೆ. 2026ರ ಡಿಸೆಂಬರ್ 1 ರಿಂದ 2027ರ ಜನವರಿ 21 ರವರೆಗೆ ಹುಬ್ಬಳ್ಳಿ-ವಾಸ್ಕೋ ಡ ಗಾಮ ನಡುವಿನ ಸೇವೆ ರದ್ದಾಗಲಿದೆ.

ತಿರುಪತಿ-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17419/17021 ಮತ್ತು 17420/17022):
2026ರ ಡಿಸೆಂಬರ್ 3 ರಿಂದ 2027ರ ಜನವರಿ 14 ರವರೆಗೆ ಈ ರೈಲು ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಕೊನೆಗೊಳ್ಳಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ನಡುವಿನ ಸೇವೆ ರದ್ದಾಗಿದ್ದು, ಮರಳಿ ಹೊರಡುವ ರೈಲು (17420/17022) ಹುಬ್ಬಳ್ಳಿಯಿಂದಲೇ ಪ್ರಯಾಣ ಆರಂಭಿಸಲಿದೆ.

ಸಿಕಂದರಾಬಾದ್-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17039/17040):
ರೈಲು ಸಂಖ್ಯೆ 17039: 2026ರ ಡಿಸೆಂಬರ್ 2 ರಿಂದ 2027ರ ಜನವರಿ 15 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ-ವಾಸ್ಕೋ ಭಾಗದ ಸೇವೆ ರದ್ದಾಗಲಿದ್ದು, ಮರಳಿ ಹೊರಡುವ ರೈಲು (17040) ಹುಬ್ಬಳ್ಳಿಯಿಂದಲೇ ಆರಂಭವಾಗಲಿದೆ.

ಜಾಸಿಡಿಹ್-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (19322/17321):
ರೈಲು ಸಂಖ್ಯೆ 19322: 2026ರ ನವೆಂಬರ್ 30 ರಿಂದ 2027ರ ಜನವರಿ 18 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಚಲಿಸಲಿದೆ. ಮರಳಿ ಹೊರಡುವ ರೈಲು (17321) ವಾಸ್ಕೋ ಬದಲಿಗೆ ಹುಬ್ಬಳ್ಳಿಯಿಂದಲೇ ಪ್ರಯಾಣ ಬೆಳೆಸಲಿದೆ.

Related Articles

Back to top button