Kannada NewsLatestWorld

*ಎರಡು ವಿಮಾನಗಳ ನಡುವೆ ಡಿಕ್ಕಿ*: *ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಬೋಯಿಂಗ್ ವಿಮಾನ ಹಾಗೂ ಸರಕು ಸಾಗಣೆ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Miami Airport) ಶನಿವಾರ ರಾತ್ರಿ ಎರಡು ವಿಮಾನಗಳು ಡಿಕ್ಕಿ ಹೊಡೆದುಕೊಂಡಿವೆ.

ಅಮೆರಿಕ ದೇಶಾದ್ಯಂತ ವಿಮಾನ ಹಾರಾಟ ಸ್ಥಗಿತಗೊಂಡ ಪರಿಣಾಮ ವ್ಯಾಪಕ ರದ್ದತಿ ಮತ್ತು ಪ್ರಯಾಣ ಅವ್ಯವಸ್ಥೆ ಉಂಟಾದ ಒಂದು ದಿನದ ನಂತರ ಈ ಅವಘಡ ಸಂಭವಿಸಿದೆ.

ಪನಾಮ ನಗರದಿಂದ 166 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಕೋಪಾ ಏರ್ಲೈನ್ಸ್ ಬೋಯಿಂಗ್ 737 ವಿಮಾನದ ರೆಕ್ಕೆ ತುದಿ, ಯುಪಿಎಸ್ ಬೋಯಿಂಗ್ 767 ವಿಮಾನದ ಮೂತಿಗೆ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.‌

ಕೋಪಾ ವಿಮಾನಕ್ಕೆ ದಾರಿ ಮಾಡಿಕೊಡುವಂತೆ ವಾಯು ಸಂಚಾರ ನಿಯಂತ್ರಕರು ಯುಪಿಎಸ್ ಸಿಬ್ಬಂದಿಗೆ ತಿಳಿಸಿದ್ದರು ಎಂದು ಎಫ್‌ಎಎ ತಿಳಿಸಿದೆ. ಡಿಕ್ಕಿಯ ಬಗ್ಗೆ ಸಂಸ್ಥೆ ತನಿಖೆ ನಡೆಸುತ್ತಿದೆ.

ಈ ಘಟನೆಯಿಂದ ನಮ್ಮ ಪ್ರಯಾಣಿಕರಿಗೆ ಉಂಟಾದ ಅಡಚಣೆಗೆ ವಿಷಾದಿಸುತ್ತೇವೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅಧಿಕಾರಿಗಳ ತನಿಖೆಗೆ ನಾನು ಸಹಕರಿಸುತ್ತೇವೆ ಎಂದು ಕೋಪಾ ಏರ್‌ಲೈನ್ಸ್‌ ತಿಳಿಸಿದೆ.


Related Articles

Back to top button