*ಇಬ್ಬರು IPS, 23 KAS ಅಧಿಕಾರಿಗಳ ದಿಢೀರ್ ವರ್ಗಾವಣೆ*: *ಹಿಂದಿನ ವರ್ಗಾವಣೆ ಆದೇಶದಲ್ಲಿಯೂ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಇಬ್ಬರು ಐಪಿಎಸ್ ಅಧಿಕಾರಿಗಳು ಹಾಗೂ 23 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಹಲವು ಪ್ರಮುಖ ಇಲಾಖೆಗಳು, ಅಭಿವೃದ್ಧಿ ಪ್ರಾಧಿಕಾರಗಳು ಹಾಗೂ ಜಿಲ್ಲಾಡಳಿತದ ಹುದ್ದೆಗಳಿಗೆ ಹೊಸ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೆಲವು ಅಧಿಕಾರಿಗಳಿಗೆ ಹೊಸ ಸ್ಥಳ ನಿಯುಕ್ತಿ ನೀಡಲಾಗಿದ್ದರೆ, ಅಕ್ಟೋಬರ್ 28ರಂದು ಹೊರಡಿಸಿದ್ದ ಹಿಂದಿನ ವರ್ಗಾವಣೆ ಆದೇಶದಲ್ಲಿಯೂ 12 ಅಧಿಕಾರಿಗಳ ವಿಚಾರವಾಗಿ ಬದಲಾವಣೆ ಮಾಡಲಾಗಿದೆ. ಈ ಆದೇಶಗಳು ತಕ್ಷಣದಿಂದ ಜಾರಿಗೆ ಬರಲಿವೆ.
ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿದ್ದ 2012ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಎನ್. ವಿಷ್ಣುವರ್ಧನ ಅವರನ್ನು ನೇಮಕ ಮಾಡಲಾಗಿದೆ.
ಇಬ್ಬರು IPS ಅಧಿಕಾರಿಗಳ ವರ್ಗಾವಣೆ:
ಎನ್. ವಿಷ್ಣುವರ್ಧನ – ಮೈಸೂರು ನಗರ ಪೊಲೀಸ್ ಆಯುಕ್ತರು
ಸೀಮಾ ಲಾಟ್ಕರ್ -| ವರ್ಗಾವಣೆ; ಹೊಸ ಸ್ಥಳ ನಿಯುಕ್ತಿ ಬಾಕಿ
KAS ಅಧಿಕಾರಿಗಳ ವರ್ಗಾವಣೆ ಪಟ್ಟಿ:
ನೂರ್ ಜಹರಾ ಖಾನಂ – ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು
ಇಸ್ಲಾವುದ್ದೀನ್ ಗದ್ಯಾಳ್ – ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು
ಕೃಷ್ಣಮೂರ್ತಿ ಎಚ್.ಕೆ. -ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ, ಬೆಂಗಳೂರು
ಕಮಲಾಬಾಯಿ ಬಿ. – ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿಯ ಜಂಟಿ ನಿರ್ದೇಶಕರು
ಮಾರುತಿ ಬ್ಯಾಕೋಡ್ – ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು
ಪಾರ್ವತಿ – ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ, ದೇವದುರ್ಗ
ಜಿ.ಎಚ್. ಸತ್ಯನಾರಾಯಣ – ಸಾಗರ ಉಪವಿಭಾಗಾಧಿಕಾರಿ, ಶಿವಮೊಗ್ಗ ಜಿಲ್ಲೆ
ಜಂಬಗಿ ರೇಣುಕಾಪ್ರಸಾದ್ ದಿಲೀಪ್ -ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ರಾಜ್ಯ ಪ್ರತಿನಿಧಿ-1
ನಯೀಂ ಉನ್ನೀಸಾ ಆರ್. -ಪ್ರಸ್ತುತ ಹುದ್ದೆಯೊಂದಿಗೆ ರಾಜ್ಯ ಚುನಾವಣಾ ಆಯೋಗದ ತಹಶೀಲ್ದಾರ್ ಹೆಚ್ಚುವರಿ ಪ್ರಭಾರ
ನಹಿದಾ ಜಮ್ ಜಮ್ -ಬಿಡಿಎ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-07ರ ವಿಶೇಷ ಭೂಸ್ವಾಧೀನಾಧಿಕಾರಿ
ಮಂಜುನಾಥ್ ಕೆ. -ತುಮಕೂರು ಉಪವಿಭಾಗಾಧಿಕಾರಿ |
ಹಿಂದಿನ ವರ್ಗಾವಣೆ ಆದೇಶದಲ್ಲಿ 12 ಅಧಿಕಾರಿಗಳಿಗೆ ಬದಲಾವಣೆ
ಅಕ್ಟೋಬರ್ 28ರಂದು ಹೊರಡಿಸಲಾಗಿದ್ದ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಕೆಳಗಿನ 12 ಅಧಿಕಾರಿಗಳಿಗೆ ಹೊಸ ಸ್ಥಳ ನಿಯುಕ್ತಿ ಮಾಡಲಾಗಿದೆ.
ಪ್ರಕಾಶ್ ಎಂ. ನಾಶಿ – ವಲಯ ಆಯುಕ್ತರು-5, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಸಂತೋಷ್ ರಾಣಿ – ಮುಖ್ಯ ಆಡಳಿತಾಧಿಕಾರಿ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಸಿದ್ದರಾಯ ಜಟ್ಟೆಪ್ಪ ಭೋಸಗಿ -ಪುನರ್ವಸತಿ ಅಧಿಕಾರಿ, ಯುಕೆಪಿ, ಬೀಳಗಿ
ಯಲ್ಲಪ್ಪ ಗೋಣೆಣ್ಣನವರ – ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ), ಬೆಳಗಾವಿ ಜಿಲ್ಲಾ ಪಂಚಾಯತ್
ನರಸಿಂಹಮೂರ್ತಿ ಟಿ.ಎನ್. – ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಂಗಳೂರು ದಕ್ಷಿಣ
ಅಣ್ಣಾರಾವ್ ಪಾಟೀಲ್ -ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಜೆಸ್ಕಾಂ, ಕಲಬುರಗಿ
ಸುರೇಶ್ – ವಿಶೇಷ ಭೂಸ್ವಾಧೀನಾಧಿಕಾರಿ, ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆ, ಕಲಬುರಗಿ
ಅಂಜುಂ ತಬಸ್ಸುಮ್ ಲಷ್ಕರಿ – ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಲಬುರಗಿ
ಮೋಹನ್ ಭಸ್ಮೆ -ವಿಶೇಷ ಭೂಸ್ವಾಧೀನಾಧಿಕಾರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ
ಮಂಜುನಾಥ್ ಮುನ್ನೋಳ್ಳಿ – ವಲಯ ಆಯುಕ್ತರು (ದಕ್ಷಿಣ), ಬೆಳಗಾವಿ ಮಹಾನಗರ ಪಾಲಿಕೆ
ನಾಗಮ್ಮ -ಮುಖ್ಯ ಆಡಳಿತಾಧಿಕಾರಿ, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಡಾ. ನಯನ ಎಂ. – ಉಪವಿಭಾಗಾಧಿಕಾರಿ, ಕೋಲಾರ ಉಪವಿಭಾಗ |
ಬದಲಾವಣೆಗಳು:
- ಮೈಸೂರು: ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ ನೇಮಕ.
- ಮುಡಾ: ಇಸ್ಲಾವುದ್ದೀನ್ ಗದ್ಯಾಳ್ ಅವರಿಗೆ ಆಯುಕ್ತರ ಜವಾಬ್ದಾರಿ.
- ಕೆಇಎ: ಹಾಸನದ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಅವರಿಗೆ ಆಡಳಿತಾಧಿಕಾರಿ ಹುದ್ದೆ.
- ಸಾಗರ: ಜಿ.ಎಚ್. ಸತ್ಯನಾರಾಯಣ ಅವರಿಗೆ ಉಪವಿಭಾಗಾಧಿಕಾರಿ ಹುದ್ದೆ.
- ಕಲಬುರಗಿ: ಮಾರುತಿ ಬ್ಯಾಕೋಡ್ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಜವಾಬ್ದಾರಿ.
- ತುಮಕೂರು: ಮಂಜುನಾಥ್ ಕೆ. ಅವರಿಗೆ ಉಪವಿಭಾಗಾಧಿಕಾರಿ ಹುದ್ದೆ.
ಈ ವರ್ಗಾವಣೆಗಳಿಂದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ನಗರಾಭಿವೃದ್ಧಿ, ಪರೀಕ್ಷಾ ಪ್ರಾಧಿಕಾರ, ನೀರಾವರಿ ಹಾಗೂ ವಿವಿಧ ನಿಗಮಗಳ ಆಡಳಿತದಲ್ಲಿ ಬದಲಾವಣೆಗಳಾಗಿವೆ.




