Belagavi NewsBelgaum NewsKannada NewsKarnataka News

*ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬಿನ ದರ ನಿಗದಿ ಮಾಡುವ ಮೂಲಕ ಹಾಲಸಿದ್ಧನಾಥ ಕಾರ್ಖಾನೆ ಸಾಧನೆ*: *ಟನ್ ಕಬ್ಬಿಗೆ ಮೊದಲ ಕಂತಿನಲ್ಲೇ 3,800 ರೂ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಈ ಹಿಂದೆ ಪ್ರತಿ ಟನ್ ಕಬ್ಬಿಗೆ 3,770 ರೂ. ಘೋಷಿಸಲಾಗಿತ್ತು. ಈಗ 30 ರೂ. ಹೆಚ್ಚಳ ಮಾಡಲಾಗಿದ್ದು, ಮೊದಲ ಕಂತಿನ ಪರಿಷ್ಕೃತ ದರ 3,800 ರೂ. ದೊರೆಯಲಿದೆ ಎಂದು ಕಾರ್ಖಾನೆ ಮಾರ್ಗದರ್ಶಕರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೋಲೆ ಹೇಳಿದರು.

ಸಹಕಾರ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಘೋಷಿಸಿದಂತೆ ಪ್ರಸಕ್ತ ಹಂಗಾಮಿನ ಅಂತಿಮ ಸರಾಸರಿ ಸಕ್ಕರೆ ಇಳುವರಿ ಶೇ. 11.50 ಅಥವಾ ಅದಕ್ಕಿಂತ ಹೆಚ್ಚಾದಲ್ಲಿ ಪ್ರತಿ ಟನ್‌ಗೆ ಹೆಚ್ಚುವರಿಯವಾಗಿ 100 ರೂ. ಹಂಗಾಮಿನ ಮುಕ್ತಾಯದ ನಂತರ ಪಾವತಿಸಲಾಗುವುದು. ಅಲ್ಲದೆ, 2026-27ನೇ ಹಂಗಾಮಿನಲ್ಲಿ ಉತ್ಪಾದನೆಯಾಗುವ ಸಕ್ಕರೆ ಸರಾಸರಿ ಮಾರಾಟ ದರ ಪ್ರತಿ ಕೆಜಿಗೆ 50 ರೂ., ಇದ್ದಲ್ಲಿ ಪ್ರತಿ ಟನ್‌ಗೆ 200 ರೂ., 55 ರೂ. ಇದ್ದಲ್ಲಿ 400 ರೂ. ಮತ್ತು 60 ರೂ. ಇದ್ದಲ್ಲಿ 600 ರೂ. ಹೆಚ್ಚುವರಿ ಮೊತ್ತವನ್ನು ಮುಂಬರುವ ಕಬ್ಬು ಸರಬರಾಜು ಹಂಗಾಮು ಪ್ರಾರಂಭವಾಗುವ ಮೊದಲು ಪಾವತಿಸಲಾಗುವುದು. ಕಾರ್ಖಾನೆಗೆ ಗರಿಷ್ಠ ಪ್ರಮಾಣದ ಕಬ್ಬು ಕಳುಹಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆಯ ಅಧ್ಯಕ್ಷ ಜಯಕುಮಾರ ಖೋತ್, ನಿರ್ದೇಶಕ ಮಲಗೊಂಡಾ ಪಾಟೀಲ, ಅವಿನಾಶ ಪಾಟೀಲ, ಪವನಕುಮಾರ ಪಾಟೀಲ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ಜಯವಂತ ಭಾಟಲೆ, ರಾಜು ಗುಂದೇಶಾ, ಶ್ರೀಕಾಂತ ಬನ್ನೆ, ವಿನಾಯಕ ಪಾಟೀಲ, ಸುಹಾಸ ಗುಗೆ, ರಾಮಸಾಹೇಬ ಫರಾಳೆ, ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಕಾನಡೆ, ಡಾ. ಸುದರ್ಶನ ಮುರಾಬಟ್ಟೆ, ರಣಜಿತ ಮಾನೆ, ಕಿರಣ ನಿಕಾಡೆ ಸೇರಿದಂತೆ ಕಾರ್ಖಾನೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Back to top button