Kannada NewsKarnataka NewsLatest

*ಆಭರಣ ಪ್ರಿಯರಿಗೆ ಗುಡ್‌ನ್ಯೂಸ್*: *12,500ಕ್ಕಿಂತ ಕೆಳಗಿಳಿದ ಚಿನ್ನದ ದರ*

ಪ್ರಗತಿವಾಹಿನಿ ಸುದ್ದಿ: ಚಿನ್ನದ ಆಭರಣ ಮಾಡಿಸಿಕೊಳ್ಳಲು ಕಾಯುತ್ತಿದ್ದವರಿಗೆ ಇದೀಗ ಸಂತಸದ ಸುದ್ದಿ. ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿರುವ ಬಂಗಾರದ ಬೆಲೆ ಮಂಗಳವಾರವೂ ಕಡಿಮೆಯಾಗಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ 70 ರೂಪಾಯಿ ಇಳಿಕೆಯಾಗಿದ್ದು, ಕಳೆದ 10ರಿಂದ 12 ದಿನಗಳಲ್ಲಿ ಬರೋಬ್ಬರಿ 915 ರೂಪಾಯಿ ಕುಸಿತ ಕಂಡಿದೆ. ಇದರಿಂದ ಆಭರಣ ಚಿನ್ನದ ಬೆಲೆ 12,500 ರೂಪಾಯಿಗಳ ಗಡಿಯೊಳಗೆ ಬಂದಿದೆ.

ನವೆಂಬರ್ 17ರ ದರದ ಪ್ರಕಾರ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,24,700 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,36,040 ರೂಪಾಯಿ ಇದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದ್ದು, 100 ಗ್ರಾಂ ಬೆಳ್ಳಿಯ ಬೆಲೆ 19,000 ರೂಪಾಯಿ ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದ್ದರೂ, ಎಂಸಿಎಕ್ಸ್ ಫ್ಯೂಚರ್ಸ್ ಸೇರಿದಂತೆ ಇತರ ವಹಿವಾಟುಗಳಲ್ಲಿ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ.

ಭಾರತದಲ್ಲಿ ಒಂದು ಗ್ರಾಂ ಚಿನ್ನದ ದರವನ್ನು ಗಮನಿಸಿದರೆ, 24 ಕ್ಯಾರಟ್ ಚಿನ್ನ 13,604 ರೂಪಾಯಿ, 22 ಕ್ಯಾರಟ್ ಚಿನ್ನ 12,470 ರೂಪಾಯಿ ಹಾಗೂ 18 ಕ್ಯಾರಟ್ ಚಿನ್ನ 10,203 ರೂಪಾಯಿ ಇದೆ. ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 190 ರೂಪಾಯಿ ಇದೆ.

ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ ಮತ್ತು ಕೇರಳದಲ್ಲಿ 22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 12,470 ರೂಪಾಯಿ ಇದೆ. ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ 12,485 ರೂಪಾಯಿ ದರವಿದೆ. ಅಹಮದಾಬಾದ್‌ನಲ್ಲಿ 12,475 ರೂಪಾಯಿ ಇದೆ.

ವಿದೇಶಗಳಲ್ಲಿನ 24 ಕ್ಯಾರಟ್ ಚಿನ್ನದ ದರವನ್ನು ಗಮನಿಸಿದರೆ, ಮಲೇಷ್ಯಾದಲ್ಲಿ ಒಂದು ಗ್ರಾಂಗೆ 521 ರಿಂಗಿಟ್ (11,932 ರೂಪಾಯಿ), ದುಬೈನಲ್ಲಿ 466 ಡಿರಾಮ್ (11,888 ರೂಪಾಯಿ), ಅಮೆರಿಕದಲ್ಲಿ 127 ಡಾಲರ್ (11,900 ರೂಪಾಯಿ) ಹಾಗೂ ಸಿಂಗಾಪುರದಲ್ಲಿ 170.30 ಸಿಂಗಾಪುರ್ ಡಾಲರ್ (12,386 ರೂಪಾಯಿ) ಇದೆ.

ಇನ್ನು ಕತಾರ್‌ನಲ್ಲಿ 12,042 ರೂಪಾಯಿ, ಸೌದಿ ಅರೇಬಿಯಾದಲ್ಲಿ 12,010 ರೂಪಾಯಿ, ಓಮನ್‌ನಲ್ಲಿ 12,058 ರೂಪಾಯಿ ಹಾಗೂ ಕುವೈತ್‌ನಲ್ಲಿ 11,904 ರೂಪಾಯಿ ಇದೆ.

ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಬದಲಾಗುತ್ತವೆ. ಇಲ್ಲಿ ನೀಡಿರುವ ದರಗಳು ಅಂದಾಜು ಮಾಹಿತಿಯಾಗಿದ್ದು, ಆಭರಣ ಖರೀದಿಸುವಾಗ ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಸೇರಿದಂತೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು.

Related Articles

Back to top button