
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಎನ್ ಆರ್ ಸಿ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಧೃಡಪಡಿಸಿದೆ.
ದೆಹಲಿ-ಗುರುಗ್ರಾಮ ಗಡಿಯಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು, ಭೂಮಿಯ 18 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಮೂಲಕ ದೆಹಲಿ-ಎನ್‍ಸಿಆರ್ ಪ್ರದೇಶವು ಕಳೆದ 2 ತಿಂಗಳುಗಳಲ್ಲಿ 10ಕ್ಕೂ ಹೆಚ್ಚು ಭೂಕಂಪಗಳಿಗೆ ಸಾಕ್ಷಿಯಾಗಿದೆ. ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಭಾಗದಲ್ಲಿ ಭೂಮಿ ಕಂಪಿಸಿದೆ.
ಬುಧವಾರ ರಾತ್ರಿ ನೋಯ್ಡಾ ಬಳಿ ಮಧ್ಯಮ ತೀವ್ರತೆಯ 3.0 ಭೂಕಂಪ ಸಂಭವಿಸಿತ್ತು. ದೆಹಲಿಯಲ್ಲಿ ಸಂಭವಿಸುತ್ತಿರುವ ಸರಣಿ ಭೂಕಂಪಗಳು ಭವಿಷ್ಯದಲ್ಲಿ ದೊಡ್ಡ ಆಘಾತವನ್ನು ಸೃಷ್ಟಿಸುವ ಆತಂಕವನ್ನು ಹೆಚ್ಚಿಸಿದೆ.