Kannada NewsKarnataka NewsLatest

ಯಡೂರಿನಲ್ಲಿ ಕೃತಿ ಬಿಡುಗಡೆ ಮಾಡಿದ ಈರಣ್ಣ ಕಡಾಡಿ

ಪ್ರಗತಿವಾಹಿನಿ ಸುದ್ದಿ, ಮಾಂಜರಿ -: ನೂತನವಾಗಿ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರನ್ನು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ಅವರು ಯಡೂರಿನಲ್ಲಿ ಗುರುವಾರ ಸನ್ಮಾನಿಸಿದರು.

ಶ್ರೀ ಕಾಶಿ ಪೀಠದ ಡಾ.ಚಂದ್ರಶೇಖರ ಪಂಡಿತರಾದ್ಯ ಶಿವಾಚಾರ್ಯ ಅವರು ಸಂಸ್ಕೃತದಲ್ಲಿ ಬರೆದ ಸಿದ್ದಾಂತ ಶಿಖಾಮಣಿ ದಾರ್ಶನಿಕ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಅವರ ಕೃತಿಯನ್ನು ಬಿಡುಗಡೆ ಮಾಡಿ, ರಾಜ್ಯಸಭಾ ಸದಸ್ಯ
ಈರಣ್ಣಾ ಕಡಾಡಿ ಮಾತನಾಡಿ, ಇಂತಹ ಮಹಾಸ್ವಾಮಿಜಿಗಳು ಬರೆದ ಕೃತಿಯನ್ನು ಬಿಡುಗಡೆ ಮಾಡುತ್ತಿರುವದು ನನ್ನ ಸೌಭಾಗ್ಯ ಎಂದರು.

Home add -Advt

ಯಡೂರ ಸ್ವಾಮಿಜಿಗಳು ಈ ಭಾಗದಲ್ಲಿ ಸಾಕಷ್ಟು ಸಮಾಜ ಮುಖೇನ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಶ್ರೀ ಮಠ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಕಾಶಿ ಪೀಠದ ಡಾ.ಚಂದ್ರಶೇಖರ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ, ಅಂಬಿಕಾನಗರದ ಶಿವಾಚಾರ್ಯ ಹಾಗೂ ಶ್ರೀಶೈಲ ತುಪ್ಪದ, ಅಜೀತರಾವ ದೇಸಾಯಿ, ಚನ್ನಗೌಡ ಪಾಟೀಲ, ನರಸಗೌಡ ಕಮತೆ, ಚನ್ನಪ್ಪಾ ಹಕಾರೆ, ನಾಗೇಂದ್ರ ಜೋಶಿ, ಸಚೀನ ಪಾಟೀಲ, ರಂಜೀತರಾವ್ ದೇಸಾಯಿ, ರಾಜು ಹಕಾರೆ ಇತರರು ಉಪಸ್ಥಿತರಿದ್ದರು.

Related Articles

Back to top button