Latest

ಬೇರೆಯವರು ಹಾಕಿದ ಪೋಸ್ಟ್ ಗೆ ಕಮೆಂಟ್ ಮಾಡಿದ್ದೆ ಅಷ್ಟೇ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನವೀನ್, ನಾನು ಬೇಕೂ ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ. ಅವರು ಮಾಡಿದ್ದ ಪೋಸ್ಟ್ ಗೆ ಕಮೆಂಟ್ ಮಾಡಿದ್ದೆ ಅಷ್ಟೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕುರಿತು ನವೀನ್, ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ನಾನು ಬೇಕು ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ, ಅವರು ಮಾಡಿದ್ದ ಪೋಸ್ಟ್ ಗೆ ಕಮೆಂಟ್ ಮಾಡಿದ್ದೇನೆ ಅಷ್ಟೆ. ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕಮೆಂಟ್ ಮಾಡಿದ್ದೆ ಅಷ್ಟೇ ಎಂದು ತಿಳಿಸಿದ್ದಾನೆ.

Home add -Advt

ಬೇರೆಯವರ ಪೋಸ್ಟ್ ಗಳಿಗೆ ಕಮೆಂಟ್ ಮಾಡಿದ್ದೆ. ನಾನಾಗಿ ಯಾವುದೇ ಪೋಸ್ಟ್ ಮಾಡಿಲ್ಲ. ರಾಮ ಜನ್ಮಭೂಮಿ ಶಿಲಾನ್ಯಾಸದ ವೇಳೆ ಏರಿಯಾದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದ್ದೆ. ಈ ವೇಳೆ ಅಪರಿಚಿತ ನಂಬರ್ ಗಳಿಂದ ನನಗೆ ಬೆದರಿಕೆ ಕರೆಗಳು ಬಂದಿದ್ದವು. ದುಷ್ಕರ್ಮಿಗಳು ಫೋನ್ ಮಾಡಿ ಬೆದರಿಕೆ ಹಾಕಿದ್ದರು. ಬೆದರಿಕೆ ಕರೆಗಳಿಗೆ ಜಗ್ಗದೆ ನನ್ನ ಕೆಲಸ ಮುಂದುವರೆಸಿದ್ದೆ ಎಂದು ಹೇಳಿದ್ದಾನೆ.

Related Articles

Back to top button