ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಸ್ಕ್ ತಪಾಸಣೆಗೆ ಮುಂದಾದ ಪೊಲೀಸರ ಬಲೆಗೆ ಅಂತರಾಜ್ಯ ಖೋಟಾ ನೋಟು ದಂಧೆಕೋರರು ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರು ಮೈಕೋಲೇಔಟ್ ಠಾಣೆಯಲ್ಲಿ ನಡೆದಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಸುಮನ್ (36), ದೇವರಾಜನ್ (31), ಮುನಿಶೇಖರ್ (29) ಬಂಧಿತ ಆರೋಪಿಗಳು.
ಆರೋಪಿಗಳು ತಮಿಳುನಾಡು ನೋಂದಣಿ ಸಂಖ್ಯೆಯ ಕಾರಿನಲ್ಲಿ ಖೋಟಾನೋಟುಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದರು. ಖದೀಮರು ಮಾಸ್ಕ್ ಧರಿಸಿರದ ಕಾರಣ ತಪಾಸಣೆಗೆ ಹಾಗೂ ದಂಡ ವಿಧಿಸಲೆಂದು ಕಾರನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಸಂಶಯಾಸ್ಪದವಾಗಿ ನಡೆದುಕೊಂಡಿದ್ದಾರೆ. ಪರಿಶೀಲನೆ ನಡೆಸಿದಾಗ ಖೋಟಾ ನೋಟುಗಳಿರುವುದು ಪತ್ತೆಯಾಗಿದೆ.
ಬಂಧಿತರಿಂದ 2000 ಹಾಗೂ 500 ರೂ ಮುಖ ಬೆಲೆಯ 7 ಲಕ್ಷದ 78 ಸಾವಿರ ರೂಪಾಯಿ ಖೋಟಾ ನೋಟು ಜಪ್ತಿ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ