ಪ್ರಗತಿವಾಹಿನಿಯಲ್ಲಿ ನಿಮ್ಮ ಸಮಸ್ಯೆಗೆ ಸಮಾಧಾನ

ಸಮಸ್ಯೆ – ಸಮಾಧಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರಗತಿ ಮೀಡಿಯಾ ಹೌಸ್  ಪ್ರಕಟಿಸುತ್ತಿರುವ  ಪ್ರಗತಿವಾಹಿನಿ ಡಾಟ್ ಕಾಂ ಈಗ 2 ವರ್ಷ ಪೂರೈಸಿದ್ದು, 3ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಲಕ್ಷಾಂತರ ಜನರ ಮನಗೆದ್ದಿರುವ ಪ್ರಗತಿವಾಹಿನಿ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಒಂದೊಂದಾಗಿ ತೆರೆದುಕೊಳ್ಳಲಿವೆ.

ಮೊದಲ ಹಂತದಲ್ಲಿ ಪ್ರಗತಿವಾಹಿನಿ ವಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಶ್ನೋತ್ತರ ವಿಭಾಗ (ಆಪ್ತಸಮಾಲೋಚನೆ) ವನ್ನು ಆರಂಭಿಸುತ್ತಿದೆ. ನಿಮ್ಮ ವಯಕ್ತಿಕ (ಶೈಕ್ಷಣಿಕ, ಕೌಟುಂಬಿಕ, ಲೈಂಗಿಕ, ಆರ್ಥಿಕ, ಕಾನೂನಾತ್ಮಕ) ಸಮಸ್ಯೆಗಳಿದ್ದಲ್ಲಿ ನಮಗೆ ಬರೆದು ಕಳುಹಿಸಿದರೆ ತಜ್ಞರು ಅವುಗಳಿಗೆ ಉತ್ತರಿಸುತ್ತಾರೆ. ನೀವು ಬಯಸಿದರೆ ಪ್ರಶ್ನೆ ಕೇಳಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಆದರೆ ಪ್ರಶ್ನೆಯ ಜೊತೆಗೆ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಕಳಿಸುವುದು ಕಡ್ಡಾಯ. ಪ್ರತಿ ಭಾನುವಾರ ಈ ಅಂಕಣ ಪ್ರಕಟವಾಗಲಿದೆ.

Home add -Advt

ಇ ಮೇಲ್ ಅಥವಾ ವಾಟ್ಸಪ್ ಮೂಲಕ ನಿಮ್ಮ ಪ್ರಶ್ನೆಗಳನ್ನು ಕಳುಹಿಸಿ –

ಇ ಮೇಲ್  – [email protected]

ವಾಟ್ಸಪ್ – 9341029326 (ಫೋನ್ ಮಾಡಬೇಡಿ)

 

Related Articles

Back to top button