ಪ್ರಗತಿವಾಹಿನಿ ಸುದ್ದಿ; ದಾವಣಗೆರೆ; ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಕೇಶವನಗರದಲ್ಲಿ ನಡೆದಿದೆ.
ಲೈನ್ ಮ್ಯಾನ್ ನಿರ್ಲಕ್ಷದಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಲೈನ್ ಮ್ಯಾನ್ ಕರೆಂಟ್ ತೆಗೆದಿದ್ದಾಗಿ ಹೇಳಿದ್ದರಿಂದ ಕಾರ್ಮಿಕರಿಬ್ಬರು ಕರೆಂಟ್ ಕಂಬದ ಮೇಲೆ ಹತ್ತಿ ಲೈನ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿದೆ. ಕಾರ್ಮಿಕ ರಕ್ಷಣೆಗಾಗಿ ಕೂಗಿ ಕೂಗಿ ಕೊನೆಗೂ ಕಂಬದ ಮೇಲೆಯೇ ಪ್ರಾಣಬಿಟ್ಟಿದ್ದಾನೆ.
ಕಂಬದ ಮೇಲಿದ್ದ ಇನ್ನೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ