Latest

ಮಹಾರಾಷ್ಟ್ರದಲ್ಲಿ ಒಂದು ತಿಂಗಳು ಲಾಕ್ ಡೌನ್?

ಪ್ರಗತಿವಾಹಿನಿ ಸುದ್ದಿ, ಮುಂಬೈ – ಮಹಾರಾಷ್ಟ್ರದಲ್ಲಿ 20 ಜನರಲ್ಲಿ ಬ್ರಿಟನ್ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ಕೊರೋನಾ ಎರಡನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಮತ್ತೆ ಲಾಕ್ ಡೌನ್ ಜಾರಿಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಚಿಂತನೆ ನಡೆಸಿದೆ.

ಜನೆವರಿ 31ರ ವರೆಗೂ ಕೊರೋನಾ ನಿಯಮಾವಳಿಗಳು ಮುಂದುವರಿಯಲಿವೆ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಲಾಕ್ ಡೌನ್ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಜನೆವರಿ ಅಂತ್ಯದವರೆಗೂ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆ ಇದೆ.

Home add -Advt

ಕೊರೋನಾ ಮೊದಲ ಅಲೆಯಲ್ಲಿ ಮಹಾರಾಷ್ಟ್ರ ಆರಂಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳದೆ ಎಡವಿತ್ತು. ಮುಂಬೈ ಸೇರಿದಂತೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾ ಹರಡಿ ಕಂಗೆಡಿಸಿತ್ತು. ಹಾಗಾಗಿ ಈ ಬಾರಿ ಆರಂಭದಲ್ಲೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ.

Related Articles

Back to top button