Latest

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ; ವಿಡಿಯೋದಲ್ಲಿದ್ದ ಯುವತಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋದಲ್ಲಿದ್ದ ಯುವತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೂರುದಾರ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ದಾಖಲಿಸಿದಂತೆ ಯುವತಿ ಆರ್.ಟಿ.ನಗರದ ಪಿ.ಜಿಯಲ್ಲಿ ಇರಲಿಲ್ಲ. ಬದಲಾಗಿ ಆಕೆ ಒಂದು ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಳು. ಆಕೆಯ ಮೊಬೈಲ್ ನಂಬರ್ ಆಧರಿಸಿ ಯುವತಿಯನ್ನು ಪತ್ತೆಹಚ್ಚಿದ್ದು, ಯಾವುದೇ ಕ್ಷಣದಲ್ಲಿ ಯುವತಿಯಿಂದ ಹೇಳಿಕೆ ಪಡೆಯುವ ಸಾಧ್ಯತೆಯಿದೆ.

ಯುವತಿ ಬಾಡಿಗೆಗೆ ಇದ್ದ ಮನೆಯ ಮಾಲೀಕನಿಂದಲೂ ಆಕೆಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಯುವತಿ ವಾಸವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿ, ವಾಪಸ್ ಆಗಿದ್ದಾರೆ. 2018ರಿಂದ ಯುವತಿ ಅದೇ ಬಾಡಿಗೆ ಮನೆಯಲ್ಲಿದ್ದು, ಆಕೆಯ ಮನೆಗೆ ಆಗಾಗ ಸ್ನೇಹಿತೆಯರು ಬಂದು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

Related Articles

Back to top button