Latest

ಸಿಆರ್ ಪಿಸಿ 164 ಪ್ರಕಾರ ಹೇಳಿಕೆ ದಾಖಲಿಸಲು ಕೋರ್ಟ್ ಸಮ್ಮತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮಹತ್ವದ ಹಂತ ತಲುಪಿದ್ದು, ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನಿಡಲು 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪರ ವಕೀಲ ಜಗದೀಶ್ ಯುವತಿಗೆ ಎಸ್ ಐಟಿ ಮೇಲೆ ಹಾಗೂ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಹಾಗಾಗಿ ಕೋರ್ಟ್ ಮುಂದೆ ಹಾಜರಾಗಿ ಯುವತಿ ಹೇಳಿಕೆ ನಿಡಲು ಮುಂದಾಗಿದ್ದಾಳೆ. ಇದಕ್ಕೆ ಅನುಮತಿ ನೀಡುವಂತೆ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಮಾಡಿದರು. ವಕೀಲರ ಹೇಳಿಕೆಗೆ ಸಮ್ಮತಿ ನೀಡಿದ ನ್ಯಾಯಾಧೀಶರು, ಮೊದಲು ಸಿಆರ್ ಪಿಸಿ ಸೆಕ್ಷನ್ 164ರ ಅಡಿ ಯುವತಿ ಹೇಳಿಕೆಯನ್ನು ನಾವು ದಾಖಲಿಸಿಕೊಳ್ಳುತ್ತೇವೆ. ಬಳಿಕ ಯುವತಿಯನ್ನು ತನಿಖಾಧಿಕಾರಿಗೆ ಒಪ್ಪಿಸಲಾಗುವುದು. ನಂತರ ಯುವತಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಲಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಯುವತಿ ನೀಡುವ ಹೇಳಿಕೆಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು. ಪೊಲೀಸರು ಕೂಡ ಯುವತಿಗೆ ರಕ್ಷಣೆ ನೀಡಲು ಒಪ್ಪಿರುವುದಾಗಿ ನ್ಯಾಯಾಧೀಶರು ತಿಳಿಸಿದರು. ಈ ಹಿನ್ನಲೆಯಲ್ಲಿ ಯುವತಿ ಶೀಘ್ರದಲ್ಲೇ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾಳೆ.

 ಎಸ್ಐಟಿ ವಾದ ಒಪ್ಪದ ಕೋರ್ಟ್

ಇದಕ್ಕೂ ಮೊದಲು ತನಿಖಾ ಸಂಸ್ಥೆ ಎಸ್ಐಟಿ ಮೊದಲು ಯುವತಿಯನ್ನು ತಮ್ಮ ಸುಪರ್ಧಿಗೆ ಕೊಡಬೇಕು ಎನ್ನುವ ವಾದ ಮಂಡಿಸಿತು. ಆದರೆ ನ್ಯಾಯಾಧೀಶರು ಅದನ್ನು ಒಪ್ಪಲಿಲ್ಲ. ಮೊದಲು ನ್ಯಾಯಾಧೀಶರ ಎದುರು ಹಾಜರಾಗಲಿ. ನಂತರ ತನಿಖಾಧಿಕಾರಿ ಸುಪರ್ಧಿಗೆ ಪಡೆದು ವಿಚಾರಣೆ ನಡೆಸಲಿ ಎಂದು ತಿಳಿಸಿದರು.

ಸಿಡಿ ಲೇಡಿ ಕೋರ್ಟ್ ಗೆ ಹಾಜರಾಗುವ ಬಗ್ಗೆ ಸ್ಫೋಟಕ ಸುಳಿವು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button