
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಆರಂಭವಾಗಿದ್ದು, ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಸಿಗದೇ ವೈದ್ಯ ಸೇರಿ 8 ಸೋಂಕಿತರು ಸಾವನ್ನಪ್ಪಿರುವ ಘಟನೆ ದೆಹಲಿಯ ಆಸ್ಪತ್ರೆಯಲ್ಲಿ ನಡೆದಿದೆ.
ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ದೆಹಲಿಯ ಎರಡು ಆಸ್ಪತ್ರೆಗಳಲ್ಲಿ ಸರ್ ಗಂಗಾರಾಮ್ ಆಸ್ಪತ್ರೆ ಹಾಗೂ ಜೈಪುರ ಗೋಲ್ಡನ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗಿ ರೋಗಿಗಳು ಸಾವನ್ನಪ್ಪಿದ್ದರು. ಇದೀಗ ಬಾತ್ರಾ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ಇಲ್ಲದೇ ವೈದ್ಯ ಸೇರಿ 8 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉಮೇಶ್ ಜಾಧವ್ ಗೆ ಮೂಟೆಗಟ್ಟಲೇ ಲಸಿಕೆ; ಎಲ್ಲಿಂದ ಬಂತು ಎಂದ ವಿಪಕ್ಷ ನಾಯಕ