Kannada NewsLatest

ಸಿಡಿ ಕೇಸ್ ಗೆ ಟ್ವಿಸ್ಟ್; ಅವನು ನಾನೇ ಎಂದ ರಮೇಶ್ ಜಾರಕಿಹೊಳಿ ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದ್ದು, ಈ ವರೆಗೆ ಸಿಡಿ ಆರೋಪ ನಿರಾಕರಿಸುತ್ತಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿಯಲ್ಲಿದ್ದ ವ್ಯಕ್ತಿ ನಾನೇ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಮುಂದೆ ಹೇಳಿಕೆ ನೀಡುವ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ, ಸಿಡಿಯಲ್ಲಿರುವುದು ನಾನೇ. ಸಿಡಿಯಲ್ಲಿದ್ದ ಯುವತಿ ಪರಿಚಿತಳೆ. ಆಕೆಯೊಂದಿಗೆ ಸಹಮತದಿಂದ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

Home add -Advt

ಅಲ್ಲದೇ ಯುವತಿ ಪ್ರಾಜೆಕ್ಟ್ ವಿಚಾರವಾಗಿ ತನ್ನನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಇಡಿ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ.

ಇದೊಂದು ನಕಲಿ ಸಿಡಿ ಎಂದು ಈ ಮೊದಲು ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದರು. ನಕಲಿ ಸಿಡಿ ತಯಾರಿಸಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಲಾಗಿದೆ ಎಂದೂ ಲಿಖಿತ ದೂರನ್ನು ಸಹ ಸಲ್ಲಿಸಿದ್ದರು.

ಆದರೆ ಇದೀಗ ರಮೇಶ ಜಾರಕಿಹೊಳಿ ತಮ್ಮ ಹೇಳಿಕೆ ಮತ್ತು ನಿಲುವನ್ನು ಬದಲಿಸಿರುವುದರಿಂದ ಇಡೀ ಪ್ರಕರಣ ಹೊಸ ತಿರುವು ಪಡೆಯಲಿದೆ.

ಇದೇ ವೇಳೆ ಬ್ಲ್ಯಾಕ್ ಮೇಲ್ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಜೊತೆ ರಮೇಶ ಜಾರಕಿಹೊಳಿ ಟೀಂ ಚರ್ಚೆ

Related Articles

Back to top button