ಎಸ್.ಎಸ್.ಎಲ್.ಸಿ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಎಂದ ಶಿಕ್ಷಣ ಸಚಿವ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎರಡೇ ದಿನಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.
ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಡಿಪಿಐ ಗಳ ಸಭೆ ನಡೆಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷೆ ಬರೆಯಲು ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು. ಶೀಘ್ರದಲ್ಲಿಯೇ ಎಸ್.ಎಸ್.ಎಲ್.ಸಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ಸುರೇಶ್ ಕುಮಾರ್ ಅವರು ಇಂದು ತೆಗೆದುಕೊಂಡಿರುವ ವಿಡಿಯೋ ಸಂವಾದದಲ್ಲಿ ಈ ಕೆಳಗಿನ ವಿಷಯಗಳನ್ನು ಪ್ರಸ್ತಾಪಿಸಿದರು.
೧) 2021 ಜುಲೈನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುವ ಯಾವ ಮಕ್ಕಳನ್ನು ಫೇಲ್ ಮಾಡುವುದಿಲ್ಲ ಎಲ್ಲಾ ಮಕ್ಕಳು ಪಾಸ್ ಆಗುತ್ತಾರೆ ಫಲಿತಾಂಶವನ್ನು ಗ್ರೇಡ್ ನಲ್ಲಿ ನೀಡಲಾಗುತ್ತದೆ ಇದನ್ನು ಮಕ್ಕಳಿಗೆ ಮತ್ತು ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು.
೨) ಜೂನ್ 15ರ ನಂತರ ಎಲ್ಲ ಶಿಕ್ಷಕರು ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗುವುದು. ನಂತರ ಅವಕಾಶವಿದ್ದಾಗ ಸ್ವಲ್ಪ ಸ್ವಲ್ಪ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕರೆಯಿಸಿಕೊಂಡು ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷಾ ಕುರಿತು ಮಾಹಿತಿಯನ್ನು ನೀಡುವ ಕಾರ್ಯದಲ್ಲಿ ಮುಖ್ಯಗುರುಗಳ ಆದಿಯಾಗಿ ಎಲ್ಲ ಶಿಕ್ಷಕರು ಪಾಲ್ಗೊಳ್ಳುವುದು.
೩) ಈಗಾಗಲೇ ತಮಗೆ ಜೂಮ್ ಮೀಟಿಂಗಿನಲ್ಲಿ ತಿಳಿಸಿದ ಹಾಗೆ ಪ್ರತಿ ವಿಷಯಕ್ಕೆ 40 ಅಂಕಗಳ ಮೊದಲ ದಿನಕ್ಕೆ ಮೂರು ಭಾಷಾ ವಿಷಯಗಳ 120 ಅಂಕಗಳ ಪತ್ರಿಕೆ ಎರಡನೇ ದಿನಕ್ಕೆ 120 ಅಂಕಗಳ ಗಣಿತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಪತ್ರಿಕೆ ಪರೀಕ್ಷೆ ನಡೆಸಲಾಗುತ್ತದೆ.
೪) ಪ್ರತಿ ಕೊಠಡಿಗೆ 12 ಮಕ್ಕಳಂತೆ ಸಾಕಷ್ಟು ಅಂತರವನ್ನು ಕಾಪಾಡಿಕೊಂಡು ಪರೀಕ್ಷಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಅದಕ್ಕಾಗಿ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ ಒಂದು ಬೆಂಚಿಗೆ ಒಂದು ಮಗುವಿನಂತೆ ಜಿಗ್ ಜಾಗ್ ರೀತಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತದೆ.
೫) ಎಲ್ಲಾ ಮುಖ್ಯಗುರುಗಳು ಮತ್ತು ವಿಷಯ ಶಿಕ್ಷಕರು ತಮ್ಮ ಶಾಲೆಯ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸುವುದು ಪಾಲಕರಲ್ಲಿ ಪರೀಕ್ಷೆಯ ಕುರಿತು ಇರುವ ಗೊಂದಲಗಳನ್ನು ನಿವಾರಿಸುವಲ್ಲಿ ಕ್ರಮವಹಿಸುವುದು.
೬) ಇನ್ನೆರಡು ದಿನಗಳಲ್ಲಿ ಮಂಡಳಿಯು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಓ ಎಂ ಆರ್ ಪ್ರತಿ ಮಾದರಿಯನ್ನು ಪರೀಕ್ಷಾ ಕುರಿತು ವಿವರವನ್ನು ಬಿಡುಗಡೆ ಮಾಡುತ್ತಿದ್ದಾರೆ.
೭) ಪ್ರಶ್ನೆ ಪತ್ರಿಕೆಗಳಲ್ಲಿ ಈ ವರ್ಷ ಬಹು ಆಯ್ಕೆ ಪ್ರಶ್ನೆಗಳು ಇದ್ದು ಪ್ರಶ್ನೆಗಳು ಸರಳ ನೇರವಾಗಿದ್ದು ಪ್ರತಿ ಪಾಠದ ಹಿಂಬದಿಯಲ್ಲಿ ಇರುವ ಪ್ರಶ್ನೆಗೆ ತಕ್ಕಂತ ಪ್ರಶ್ನೆಗಳಿಗೆ ಅನುಸಾರವಾದ ಪ್ರಶ್ನೆಗಳಿರುತ್ತವೆ ಹೊರತು ಅತಿ ಗೊಂದಲವಾಗಿರುವ ಪ್ರಶ್ನೆಗಳು ಇರುವುದಿಲ್ಲ.
೯) ಪರೀಕ್ಷೆ ಬರೆಯುವ ಮಕ್ಕಳಿಗೆ N-95 ಮಾಸ್ಕ್ ಗಳನ್ನು ಇಲಾಖೆಯು ವಿತರಿಸುತ್ತದೆ ಎಂದು ಮಾನ್ಯ ಸಚಿವರು ತಿಳಿಸಿರುತ್ತಾರೆ
೧೦) ಕಳೆದ ಸಾಲಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಭಾಗವಹಿಸಿದ ಎನ್.ಸಿ.ಸಿ. ಸ್ಕೌಟ್ ಮತ್ತು ಪೊಲೀಸ್ ಇಲಾಖೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸಹ ಈ ಪರೀಕ್ಷೆ ಇಲ್ಲಿಯೂ ಸಹ ಭಾಗವಹಿಸುತ್ತಾರೆ
೧೧) ಪರೀಕ್ಷೆ ಬರೆಯುವ ಮಗು ತಾನಿರುವ ವಾಸಸ್ಥಳದ ಸಮೀಪದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಈ ಸಲವೂ ಮಕ್ಕಳಿಗೆ ಅವಕಾಶವನ್ನು ನೀಡಲಾಗಿದೆ.
೧೨) ಈ ವರ್ಷದ ಪರೀಕ್ಷಾ ವೇಳಾಪಟ್ಟಿಯನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುತ್ತಾರೆ.
೧೪) ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಮಕ್ಕಳಿಗೆ ಪರೀಕ್ಷಾ ಭಯವನ್ನು ಹೋಗಲಾಡಿಸುವ ಸ್ಲೋಗನ್ ಗಳನ್ನು ಬಿತ್ತಿ ಪತ್ರಗಳನ್ನು ಪೋಸ್ಟರ್ ಗಳನ್ನು ಲಗತ್ತಿಸುವುದು.
೧೬) ಈ ಸಲ ನಡೆಸುವ ಪರೀಕ್ಷೆಯು ಮಕ್ಕಳಿಗೆ ವಿಶ್ವಾಸಾರ್ಹತೆಯನ್ನು ಮೂಡಿಸಲು ಮತ್ತು ಭವಿಷ್ಯದ ಆಯ್ಕೆಯನ್ನು ಮಾಡಿಕೊಳ್ಳಲು ನಡೆಸುವುದಾಗಿದೆ ಹೊರತು ಪಾಸ್ ಅಥವಾ ಫೇಲ್ ಮಾಡುವುದಕ್ಕಾಗಿ ಅಲ್ಲ ಎಂದು ತಿಳಿಸಿರುತ್ತಾರೆ.
೧೭) ಈ ಪರೀಕ್ಷೆ ನಡೆಯುವುದರಿಂದ ಇಲಾಖೆ ಕ್ಷಮತೆಯನ್ನು ಸಾಬೀತುಪಡಿಸುವ ದಾಗಿದೆ ಹೊರತು ಪ್ರತಿಷ್ಠೆಯಿಂದ ಅಲ್ಲ ಎನ್ನುವುದು ಎಲ್ಲರಿಗೂ ಮನವರಿಕೆಯಾಗಬೇಕು ಎಂದು ಸಚಿವರು ತಿಳಿಸಿರುತ್ತಾರೆ
ಹೈಕಮಾಂಡ್ ಶಾಸಕರ ಅಭಿಪ್ರಾಯ ಕೇಳಲು ಅವಕಾಶವಿದೆ ಎಂದ ಶಾಸಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ