Kannada NewsLatest

ಬೆಳಗಾವಿಯಲ್ಲಿ ಪೊಲೀಸರಿಗೇ ಹೊಡೆದ ಯುವಕರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಗುಂಪಾಗಿ ಸೇರಿದ್ದ ಯುವಕರಿಗೆ ಮನೆಗೆ ತೆರಳುವಂತೆ ಸೂಚಿಸಿದ್ದಕ್ಕೆ ಯುವಕರ ಗುಂಪು ಪೊಲೀಸರನ್ನೇ ಥಳಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ತಡರಾತ್ರಿ ನಗರದ ದರ್ಬಾರ ಗಲ್ಲಿ ಪ್ರದೇಶದಲ್ಲಿ ಯುವಕರ ಗುಂಪೊಂದು ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿತ್ತು. ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದೆ, ನಿಯಮ ಉಲ್ಲಂಘನೆ ಸರಿಯಲ್ಲ ಮನೆಗೆ ಹೋಗಿ ಎಂದು ಪೊಲೀಸರು ಬುದ್ಧಿ ಹೇಳಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವಕರ ಗುಂಪಿನ ನಡುವೆ ವಾಗ್ವಾದ ನಡೆದಿದ್ದು, ಯುವಕರು ಪೊಲೀಸರನ್ನು ನಿಂದಿಸಿ, ಹಿಡಿದು ಹೊಡೆದಿದ್ದಾರೆ.

Home add -Advt

ಇದೀಗ ಐವರು ಯುವಕರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 353, 332, 323, 504, 506, 143, 147, 149ರ ಅಡಿ ಪ್ರಕರಣ ದಾಖಲಾಗಿದೆ.

2nd ಪಿಯು ಫಲಿತಾಂಶಕ್ಕೆ ತಡೆ

Related Articles

Back to top button