ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಪತ್ನಿ ಸಾವಿಗೀಡಾಗಿ ವಾರದಲ್ಲೇ ಅಥ್ಲೆಟಿಕ್ ದಿಗ್ಗಜ ಮಿಲ್ಕಾ ಸಿಂಗ್ ಕೂಡ ಸಾವನ್ನಪ್ಪಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ಕೊರೋನಾದಿಂದ ಬಳಲುತ್ತಿದ್ದರು. ಆದರೆ 2 ದಿನದ ಹಿಂದೆ ಕೊರೋನಾ ನೆಗೆಟಿವ್ ಬಂದಿತ್ತು. ಆದರೂ ಬದುಕುಳಿಯಲಿಲ್ಲ. ಸುಮಾರು ಒಂದು ತಿಂಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು.
ಭಾರತದ ಮಾಜಿ ವಾಲಿಬಾಲ್ ಕ್ಯಾಪ್ಟನ್ ಆಗಿದ್ದ ಮಿಲ್ಕಾ ಸಿಂಗ್ ಪತ್ನಿ ಪತ್ನಿ ನಿರ್ಮಲ್ ಕೌರ್ ಕೂಡ 5 ದಿನಗಳ ಹಿಂದಷ್ಟೆ ಸಾವಿಗೀಡಾಗಿದ್ದರು.
ಮಿಲ್ಕಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶೋಖ ವ್ಯಕ್ತಪಡಿಸಿದ್ದರು.
In the passing away of Shri Milkha Singh Ji, we have lost a colossal sportsperson, who captured the nation’s imagination and had a special place in the hearts of countless Indians. His inspiring personality endeared himself to millions. Anguished by his passing away. pic.twitter.com/h99RNbXI28
— Narendra Modi (@narendramodi) June 18, 2021
ಅನ್ ಲಾಕ್ 2.0: ಸಂಜೆ ಮಹತ್ವದ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ