Latest

ಮದ್ಯದಂಗಡಿ ವಿರುದ್ಧ ಬೀದಿಗಿಳಿದ ಜನ : ಸಿದ್ದರಾಮಯ್ಯ ಆಪ್ತರ ಕೈವಾಡ ಆರೋಪ

ಪ್ರಗತಿವಾಹಿನಿ ಸುದ್ದಿ; ಬಾದಾಮಿ: ಕಳೆದ 15 ವರ್ಷಗಳಿಂದ ಮದ್ಯದಂಗಡಿ ಇಲ್ಲದೇ ಸಾರಾಯಿ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಾದಾಮಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಇದೀಗ ಮದ್ಯದಂಗಡಿ ತಲೆ ಎತ್ತಿದ್ದು, ಜನರ ನಿದ್ದೆಗೆಡಿಸಿದೆ ಮದ್ಯದಂಗಡಿ ವಿರುದ್ಧ ಗ್ರಾಮಸ್ಥರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಹೊಸೂರ ಗ್ರಾಮದಲ್ಲಿ ತೆರೆದಿರುವ (MSIL) (ಮದ್ಯದ ಅಂಗಡಿ) ಯನ್ನು ಸ್ಥಳಾಂತರ ಮಾಡಬೇಕು ಎಂದು ಹೊಸೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮದ್ಯದಂಗಡಿ ತೆರವಿಗೆ 6 ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರು ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಾಗೂ ಹೊಸೂರ ಗ್ರಾಮದ ಮಹಿಳೆಯರು ಯುವಕರು ಸೇರಿಕೊಂಡು ಮನವಿಯನ್ನು ಕೊಟ್ಟಿದ್ದಾರೆ ಹಾಗೂ 2 ಬಾರಿ ನೇರವಾಗಿ ಮನವಿ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದ್ದೇವೆ 21/06/2021 ರಂದು ಕೊಪ್ಪಳ ಜಿಲ್ಲಾ ಯಲಬುರ್ಗಾ ದಲ್ಲಿ ಮನವಿ ಸಲ್ಲಿದ್ದೇವೆ ಆದರೆ ಇದಕ್ಕೆ ಸ್ಪಂದಿಸಿದ ಶಾಸಕರು 5 ತಿಂಗಳ ಕಾಲ ತಡೆ ಹಿಡದಿದ್ದರು ಆದರೆ ಈಗ 8 ದಿನದಿಂದ ಮತ್ತೆ ನಮ್ಮ ಗ್ರಾಮದಲ್ಲಿ MSIL ಮದ್ಯದ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆ. ತಕ್ಷಣ ಸಾರಾಯಿ ಅಂಗಡಿ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ಇಲ್ಲಿ ಮದ್ಯದಂಗಡಿ ತೆರೆಯಬೇಡಿ ಎಂದು ಗ್ರಾಮಸ್ಥರು ಅಂಗಡಿಯವರ ಬಳಿ ಹೋಗಿ ಮನವಿ ಮಾಡಿದರೆ ಗ್ರಾಮಸ್ಥರನ್ನೇ ಬೆದರಿಸಿ ಜೈಲಿಗೆ ಕಳಿಸುವುದಾಗಿ ಹೆದರಿಸುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರ ಕೈವಾಡವಿದ್ದು, ಗ್ರಾಮದಲ್ಲಿನ ಮದ್ಯದಗಡಿ ತೆರವು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ಬಾಗಲಕೋಟ ಜಿಲ್ಲೆಯ ಆಡಳಿತ ಅಧಿಕಾರಿಗಳಿಗೆ ಗ್ರಾಮಸ್ಥರು ಮನಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಂ. ಬಿ. ದೇಸಾಯಿ. ಶ್ರೀಶೈಲ ಗಾರವಾಡ. ಬಿ. ಟಿ. ಇಸರನಾಳ. ಮಲ್ಲಪ್ಪ ಲಕ್ಕಣ್ಣವರ್ ಗ್ಯಾನಪ್ಪ ಬಿರಗೊಂಡ.. ಶರಣಪ್ಪ ಕಟ್ಟಿಮನಿ. ಅಂದಪ್ಪ ಕುಂಬಾರ ಮಹೇಶ ಜೊತೆಪ್ಪನವರ ಪ್ರೇಮಾ ಅಕ್ಕಿ.ಮಲ್ಲವ್ವ ಜೊತೆಪ್ಪನವರ ಕವಿತಾ ಮಲ್ಲೇನಿ ಹೊಸೂರಗ್ರಾಮದ ಜನೆತೆ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ಜಿಲ್ಲಾ ಪದಾಧಿಕಾರಿಗಳು ಹಾಗೂ ಹೊಸೂರ ಗ್ರಾಮದ ಹಿರಿಯರು ಮಹಿಳೆಯರು ಯುವಕರು ಭಾಗವಹಿಸಿದ್ದರು..
ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button