Latest

ಕೊರೊನಾದಿಂದ ಗುಣಮುಖರಾದವರಲ್ಲಿ AVN ಎಂಬ ಹೊಸ ಕಾಯಿಲೆ ಪತ್ತೆ!

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕೊರೊನಾ ಎರಡನೇ ಅಲೆಯಲ್ಲಿ ಉಂತಾಗುತ್ತಿರುವ ಆರೋಗ್ಯ ಸಮಸ್ಯೆಗಳು ಅಷ್ಟಿಷ್ಟಲ್ಲ. ಕೋವಿಡ್ ನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ ಬೆನ್ನಲ್ಲೇ ಇದೀಗ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ಅವಾಸ್ಕುಲರ್ ನೆಕ್ರೋಸಿಸ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಕೊರೊನಾದಿಂದ ಗುಣಮುಖರಾದ ಎರಡು ತಿಂಗಳ ಬಳಿಕ ಈ ಕಾಯಿಲೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಭೀತಿ ಆರಂಭವಾಗಿದೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಮೂವರು ರೋಗಿಗಳಿಗೆ ಅವಾಸ್ಕುಲರ್ ನೆಕ್ರೋಸಿಸ್ (AVN) ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅತಿಯಾದ ಸ್ಟಿರಾಯ್ಡ್ ಬಳಕೆಯಿಂದಲೇ ಅವಾಸ್ಕುಲರ್ ನೆಕ್ರೋಸಿಸ್ ಬರುತ್ತಿದ್ದು, ದೇಹದ ರಕ್ತದ ಹರಿವಿನ ಕೊರತೆಯಿಂದ ಮೂಳೆಗಳು ಕರಗಲು ಶುರುವಾಗುತ್ತವೆ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಮೂವರು ರೋಗಿಗಳು ಕೂಡ 40 ವರ್ಷದೊಳಗಿನವರಾಗಿದ್ದಾರೆ. ದೀರ್ಘಕಾಲದವರೆಗೆ ಕೊರೊನಾ ರೋಗ ಲಕ್ಷಣವಿರುವವರಲ್ಲಿ ಹಾಗೂ ಸ್ಟಿರಾಯ್ಡ್ ಬಳಕೆ ಮಾಡುವವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಂಡುಬರುತ್ತಿದೆ ಎಂದು ಡಾ.ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.
ದ್ವಿತೀಯ ಪಿಯು ರಿಪೀಟರ್ಸ್ ಗೆ ಭರ್ಜರಿ ಸಿಹಿ ಸುದ್ದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button