Latest

ಬಿಜೆಪಿನಾ? ಜೆಡಿಎಸ್ಸಾ?; ಗೊಂದಲದಲ್ಲಿ ಪ್ರತಾಪ್ ಸಿಂಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾಗೆ ತಿರುಗೆಟು ನೀಡುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದರು ಈ ವಿಚಾರವಾಗಿ ಮಾತನಾಡಿರುವ ಸುಮಲತಾ, ಪ್ರತಾಪ್ ಸಿಂಹ ಗೊಂದಲದಲ್ಲಿದ್ದಾರೆ ಅವರು ಮೈಸೂರು ಸಂಸದರಾ ಅಥವಾ ಮಂಡ್ಯ ಸಂಸದರಾ? ಮೊದಲು ಅವರ ಗೊಂದಲವನ್ನು ಸರಿಪಡಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಅಷ್ಟಕ್ಕೂ ಪ್ರತಾಪ್ ಸಿಂಹ ಜೆಡಿಎಸ್ ನಲ್ಲಿದ್ದಾರಾ ಅಥವಾ ಬಿಜೆಪಿಯಲ್ಲಿದ್ದಾರಾ? ಈ ಬಗ್ಗೆಯೂ ಅವರು ಕ್ಲಾರಿಟಿ ಪಡೆದುಕೊಳ್ಳಲಿ. ನಂತರ ಉತ್ತರಿಸಲಿ. ಕೋವಿಡ್ ನಿಂದಾಗಿ ಮೈಸೂರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅತಿ ಹೆಚ್ಚು ಸಾವು ಸಂಭವಿಸಿದೆ. ತಮ್ಮ ಜಿಲ್ಲೆಯಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಇಂತಹ ಹೊತ್ತಲ್ಲಿ ರಾಜಕಾರಣ ಮಾಡುವ ಅಗತ್ಯವಿದೆಯೇ? ಕೊರೊನಾ ಸಂದರ್ಭದಲ್ಲಿ ಅಧಿಕಾರಿಗಳ ಜಗಳ ತಂದಿಟ್ಟು, ಉತ್ತಮ ಮಹಿಳಾ ಅಧಿಕಾರಿಗೆ ಎಲ್ಲರೂ ಸೇರಿ ಅವಮಾನ ಮಾಡಿ ವರ್ಗಾವಣೆ ಮಾಡಿಸಿದರು. ಅದು ರಾಜಕಾರಣ ಮಾಡುವ ಸಂದರ್ಭವೇ ಈ ಬಗ್ಗೆ ಮೊದಲು ಸ್ಪಷ್ಟಪಡಿಸಲಿ ಎಂದು ಗುಡುಗಿದ್ದಾರೆ.

Home add -Advt

ಕೆಆರ್ ಎಸ್ ಬಿರುಕು ಹಾಗೂ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸುಮಲತಾ ಭೇಟಿ ನಡೆಸಿ, ಪರಿಶೀಲನೆ ನಡೆಸಿದ ವಿಚಾರವಾಗಿ ಮಾತನಾಡಿದ್ದ ಪ್ರತಾಪ್ ಸಿಂಹ ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿಗೂ ಸುಮಲತಾ ಅಡ್ಡಿಪಡಿಸಿದ್ದರು. ಇಲ್ಲ ಸಲ್ಲದ ಸುಳ್ಳು ನೆಪಗಳನ್ನು ಹೇಳಿ ಕೆಲಸಕ್ಕೆ ತಡೆಯುಂಟುಮಾಡಿದ್ದರು ಎಂದು ಆರೋಪಿಸಿದ್ದರು.
ಸುಮಲತಾ- ರಾಕ್ ಲೈನ್ ವೀಡಿಯೋ ಮಾಡ್ಸಿದ್ರಾ ಎಚ್ ಡಿ ಕೆ?
ಸಿಇಟಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ

Related Articles

Back to top button