ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪತ್ನಿ ತನ್ನನ್ನು ಬಿಟ್ಟು ಹೋದಳು ಎಂದು ನೊಂದ ಪತಿಯೊಬ್ಬ ತಾನು ಪೂಜಿಸುತ್ತಿದ್ದ ದೇವಿಯ ವಿಗ್ರಹದ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿಯ ಲಕ್ಷ್ಮಿ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಈ ದುರ್ಘಟನೆ ನಡೆದಿದೆ. ಅಶೋಕ ಪೂಜೇರಿ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅಸೋಕ್ ಲಕ್ಷ್ಮೀ ದೇವಸ್ಥಾನದ ಪೂಜಾರಿಯೂ ಆಗಿದ್ದ.
ಪ್ರತಿದಿನ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಬೇಸತ್ತ ಪತ್ನಿ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಇದರಿಂದ ಮನನೊಂದಿದ್ದ ಅಶೋಕ ಇದೀಗ ದೇವಸ್ಥಾನದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಅರ್ಚಕನಿಗೆ ಮೂವರು ಮಕ್ಕಳಿದ್ದಾರೆ. ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಇಟಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ