Latest

ರೋಟರಿ ಪದಾಧಿಕಾರಿಗಳ ಅಧಿಕಾರಗ್ರಹಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಸಂಸ್ಥೆಯ 2021-2022 ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧಿಕಾರ ಪದಗ್ರಹಣ ಸಮಾರಂಭ ಇಂದು ಶನಿವಾರ ದಿನಾಂಕ 17 ಜುಲೈ ರಂದು ಸಾಯಂಕಾಲ 7 ಗಂಟೆಗೆ ನಗರದ ಅಂಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

ರೋಟರಿ ಕ್ಲಬ್ ಆಫ್ ವೇಣುಗ್ರಾಮ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಅರವಿಂದ ಖಡಬಡಿ ಅವರು ಮೆಕ್ಯಾನಿಕ ಇಂಜನಿಯರಾಗಿದ್ದು, 34 ವರ್ಷಗಳ ಕಾಲ ವಿವಿಧ ತೈಲ ಮತ್ತು ಅನಿಲ ಉತ್ಪಾದನೆ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ತಮ್ಮ ಆಡಳಿತಾವಧಿಯಲ್ಲಿ ಅನೇಕ ಅವಿಷ್ಕಾರಗಳನ್ನು ಕಂಡು ಹಿಡಿದಿದ್ದು, ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅದರಂತೆ ನೂತನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ವಿನಯಕುಮಾರ ಬಾಳಿಕಾಯಿ ಅವರು, ಬೆಳಗಾವಿ ಪ್ರಸಿದ್ದ ಹೈಟೆಕ್ ಮೋಟಾರ್ಸ ಸಂಸ್ಥೆಯ ನಿರ್ದೇಶಕರಾಗಿದ್ದು, ಬೆಳಗಾವಿಯಲ್ಲಿ ಯಶಸ್ವಿ ಉದ್ಯಮಿಗಳಲೊಬ್ಬರಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನೂತನ ಆಡಳಿತ ಮಂಡಳಿಯ ಖಜಾಂಚಿಯಾಗಿ ಆಯ್ಕೆಯಾದ ಸುನಿಲ ಥದಾನಿ ಅವರು ಆರ್ಥಿಕ ತಜ್ಞರಾಗಿದ್ದು, ಬಂಡವಾಳ ಹೂಡಿಕೆ ಬಗ್ಗೆ, ಸ್ಟಾಕ್ ಎಕ್ಸಚೆಂಜ್ ಮಾರ್ಕೆಟ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಇವರು, ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಪದಾಧಿಕಾರಿಗಳು ಶನಿವಾರ ಅಧಿಕಾರ ಗ್ರಹಣ ಮಾಡಲಿದ್ದಾರೆ. ಸಮಾರಂಭದಲ್ಲಿ ಡಾ. ಜಾರಸನ್ ಫರ್ನಾಂಡಿಸ್ ಅವರು ಅಧಿಕಾರದ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಹೆಚ್ಚಿನ ಅಭಿವೃದ್ಧಿಯ ಸಂಕಲ್ಪ, ಹೆಚ್ಚಿನ ಸಹಕಾರದ ನಿರೀಕ್ಷೆ  – ಲಕ್ಷ್ಮಿ ಹೆಬ್ಬಾಳಕರ್      

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button