Latest

ದರ್ಶನ್ ವಿರುದ್ಧ ಮತ್ತೆ ಗುಡುಗಿದ ಇಂದ್ರಜಿತ್ ಲಂಕೇಶ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ದರ್ಶನ್ ಹೇಳಿಕೆಯಿಂದ ನನಗೇನು ಬೇಸರವಾಗಿಲ್ಲ, ಮೂರು ಬಿಟ್ಟವರ ಬಗ್ಗೆ ಏನು ಮಾತನಾಡುವುದು? ಎನ್ನುವ ಮೂಲಕ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಎಲ್ಲವನ್ನು ನಾನು ಲೀಗಲ್ ಆಗಿ ಎದುರಿಸುತ್ತೇನೆ. ಈಗಾಗಲೇ ಸುಮೋಟೋ ಕೇಸ್, ಎಫ್ ಐಆರ್ ಕೂಡ ದಾಖಲಾಗಿದೆ. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಆಡಿಯೋ ಸಾಕ್ಷ್ಯವನ್ನು ಯಾರಿಗೆ ಕೊಡಬೆಕು ಅವರಿಗೆ ಕೊಡುತ್ತೇನೆ. ಕಾನೂನು ಮೂಲಕವೇ ನಾನು ಹೋಗುತ್ತೇನೆ ಎಂದು ಹೇಳಿದ್ದಾರೆ.

Home add -Advt

ಸ್ವತ: ದರ್ಶನ್ ತಾನು ಮೂರು ಬಿಟ್ಟವನು ಎಂದಿದ್ದಾರೆ ಅಂದಮೇಲೆ ಮೂರು ಬಿಟ್ಟವರ ಬಗ್ಗೆ ನಾನು ಮಾತನಾಡಲ್ಲ, ಕೊಚ್ಚೆ ಮೇಲೆ ಕಲ್ಲು ಎಸೆಯಲು ನನಗಿಷ್ಟವಿಲ್ಲ. ದರ್ಶನ್ ವರ್ತನೆ, ಪದೇ ಪದೇ ಈ ರೀತಿ ನಡೆದುಕೊಳ್ಳುವುದನ್ನು ನೋಡಿದರೆ ಅವರು ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ ಎನುಸುತ್ತದೆ. ಡಿಪ್ರೆಶನ್ ನಂತಹ ಸಮಸ್ಯೆಯಿದ್ದರೆ ಅವರು ಟ್ರೀಟ್ ಮೆಂಟ್ ಪಡೆದುಕೊಳ್ಳುವುದು ಉತ್ತಮ. ಅವರಿಗೆ ಚಿಕಿತ್ಸೆ ಸಹಾಯದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ನಟ ದರ್ಶನ್ ಹೇಳಿಕೆ ಮನಸ್ಸಿಗೆ ನೋವು ತಂದಿದೆ; ಚಾಲೇಂಜಿಂಗ್ ಸ್ಟಾರ್ ವಿರುದ್ಧ ಜೋಗಿ ಪ್ರೇಮ್ ಅಸಮಾಧಾನ

Related Articles

Back to top button