Latest

ಮೊದಲ ಬಾರಿಗೇ ಬಂಪರ್ ಹೊಡೆದ ಇಬ್ಬರು ಸಚಿವರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಕೆಲ ಸಚಿವರಿಗೆ ಮೊದಲ ಬಾರಿಯೇ ಮಹತ್ವದ ಖಾತೆಗಳು ಲಭ್ಯವಾಗಿವೆ.

ಸಚಿವ ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್ , ಬಿ.ಸಿ.ನಾಗೇಶ್ ಅವರಿಗೆ ಮಹತ್ವದ ಖಾತೆಗಳು ಸಿಕ್ಕಿವೆ. ಇವರೆಲ್ಲರೂ ಸಂಘಪರಿವಾರದಿಂದ ಬಂದವರು. ಗೋವಿಂದ ಕಾರಜೋಳ ಅವರಿಗೆ ಸಹ ಪ್ರಮುಖ ಖಾತೆ ಲಭ್ಯವಾಗಿದೆ. ಡಿಪಿಎಆರ್, ಆರ್ಥಿಕ ಇಲಾಖೆ, ಬೆಂಗಳೂರು ಅಭಿವೃದ್ಧಿ, ಸಂಪುಟ ವ್ಯವಹಾರ ಸೇರಿದಂತೆ ನಾಲ್ಕು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಹೊಸ ಮುಖಗಳಿಗೆ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಗೃಹ, ಇಂಧನ ಹಾಗೂ ಜಲ ಸಂಪನ್ಮೂಲ ಖಾತೆಗಾಗಿ ಹಲವರು ಪೈಪೋಟಿ ನಡೆಸಿರುವ ನಡುವೆಯೇ ಮೊದಲ ಬಾರಿ ಸಂಪುಟ ಪ್ರವೇಶಿಸಿರುವ ಅರಗ ಜ್ಞಾನೇಂದ್ರ ಅವರಿಗೆ ಪವರ್ ಫುಲ್ ಗೃಹ ಖಾತೆ ಹಾಗೂ ಸುನೀಲ್ ಕುಮಾರ್ ಅವರಿಗೆ ಪ್ರಮುಖ ಖಾತೆ ಇಂಧನ ಇಲಾಖೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನು ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಬಲ ಖಾತೆಯಾಗಿರುವ ಜಲಸಂಪನ್ಮೂಲ ಖಾತೆ ಹಾಗೂ ಬಿ.ಸಿ ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಲಾಗಿದೆ.

ಜಲಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿಷ್ಠರಿಗೆ ಹಂಚಲಾಗಿದೆ.

ಸಚಿವರ ಖಾತೆಗಳ, ಜೊತೆಗೆ ಅಧಿಕಾರಿಗಳ, ಆಪ್ತ ಕಾರ್ಯದರ್ಶಿಗಳ ಮಾಹಿತಿ ಇಲ್ಲಿದೆ –

Updated Ministers As On 07.08.2021-1

ತಮ್ಮ ಖಾತೆ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಮೊದಲ ಪ್ರತಿಕ್ರಿಯೆ

ಬೊಮ್ಮಾಯಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಅರಗ ಜ್ಞಾನೇಂದ್ರಗೆ ಗೃಹ, ಸುನೀಲ್ ಕುಮಾರ್ ಗೆ ಇಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button